ನಾವೇಕೆ ಅಶ್ವಗಂಧ ಸೇವಿಸಬೇಕು?

ಆಯುರ್ವೇದ ಗಿಡಮೂಲಿಕೆ ಪದಾರ್ಥಗಳಲ್ಲಿ ಅಶ್ವಗಂಧ ಬಹಳಷ್ಟು ಪ್ರಸಿದ್ಧಿ ಪಡೆದಿದೆ. ಮನುಷ್ಯನ ಸಾಕಷ್ಟು ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಈ ಅಶ್ವಗಂಧದಲ್ಲಿದೆ. ಮಾನಸಿಕ ಒತ್ತಡವನ್ನು ಕಡಿಮೆ ಮಾಡುವುದರಿಂದ ಹಿಡಿದು ದೇಹದಲ್ಲಿ ಬಿಳಿ ರಕ್ತ ಕಣಗಳನ್ನು ವೃದ್ಧಿಸಿ, ಆರೋಗ್ಯಕರವಾದ ಜೀವನ ರೂಪಿಸುವಲ್ಲಿ ಈ ಅಶ್ವಗಂಧದ ಪಾತ್ರ ಅತ್ಯಮೂಲ್ಯ.
ಅಶ್ವಗಂಧ ಪುರಾತನ ಔಷಧೀಯ ಸಸ್ಯಗಳಲ್ಲಿ ಒಂದು. ದೇಹದ ಬಾಹ್ಯ ಮತ್ತು ಆಂತರಿಕ ಎರಡೂ ರೀತಿಯ ಒತ್ತಡಗಳನ್ನು ನಿವಾರಿಸುವ ಶಕ್ತಿ ಈ ಅಶ್ವಗಂಧದಲ್ಲಿದೆ. ಅಶ್ವಗಂಧದಲ್ಲಿ ಹಲವು ವಿಧದ ವಿಟಮಿನ್ಗಳು, ಖನಿಜಾಂಶಗಳು, ಪೋಷಕಾಂಶಗಳು ಇರುತ್ತವೆ. ಹಾಗಾಗಿ ದೇಹದ ಸದೃಢ ಬೆಳವಣಿಗೆಯಲ್ಲೂ ಇದು ಸಹಕಾರಿ. ಜೊತೆಗೆ ಹಲವು ಕಾಯಿಲೆಗಳಿಗೆ ಮದ್ದು ಈ ಅಶ್ವಗಂಧ.
ದೇಹದಲ್ಲಿ ಒತ್ತಡಕ್ಕೆ ಕಾರಣವಾಗುವ ಕಾರ್ಟಿಸೋಲ್ ಮೇಲೆ ಅಶ್ವಗಂಧ ಪರಿಣಾಮ ಬೀರುತ್ತದೆ. ಅಶ್ವಗಂಧ ಸೇವನೆಯಿಂದ ಕಾರ್ಟಿಸೋಲ್ ಹಾರ್ಮೋನ್ ಪ್ರಮಾಣ ಕಡಿಮೆಯಾಗಿ, ಒತ್ತಡದಿಂದ ಮುಕ್ತಿ ನೀಡುತ್ತದೆ.
ಡಯಾಬಿಟಿಸ್ ಗೆ ಒಳಗಾದವರು ಅಶ್ವಗಂಧ ಸೇವಿಸಬೇಕು. ಇದು ದೇಹದ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುವಲ್ಲಿ ಪ್ರಮುಖಪಾತ್ರ ವಹಿಸುತ್ತದೆ. ಇದರಿಂದ ಸಕ್ಕರೆ ಕಾಯಿಲೆಯಿಂದ ದೂರ ಇರಬಹುದು.
ಅಪಘಾತವಾದ ಸಂದರ್ಭದಲ್ಲಿ ಅಥವಾ ಸಣ್ಣ, ಪುಟ್ಟ ಗಾಯಗಳಾದ ದೇಹದಿಂದ ಹೆಚ್ಚಿನ ಪ್ರಮಾಣದಲ್ಲಿ ರಕ್ತ ಸೋರಿಕೆಯಾಗುತ್ತದೆ. ಈ ವೇಳೆ ಅಶ್ವಗಂಧವು ಕೆಂಪು ರಕ್ತ ಕಣಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿ ಮಾಡಿ, ದೇಹದಲ್ಲಿ ರಕ್ತದ ಸಮತೋಲನವನ್ನು ಕಾಯ್ದುಕೊಳ್ಳುತ್ತದೆ.
ಈ ಕೆಳಗಿನ ಆರೋಗ್ಯ ಪ್ರಯೋಜನಗಳನ್ನು ಸಾಮಾನ್ಯವಾಗಿ ಅಶ್ವಗಂಧದಿಂದ ನಿರೀಕ್ಷಿಸಬಹುದು.
ಶೀತ, ಜ್ವರ ಮತ್ತು ಕೆಮ್ಮಿನಿಂದ ಅಶ್ವಗಂಧ ಮುಕ್ತಿ ಕೊಡುತ್ತದೆ.
ಮೈ ಕೈ ನೋವು ದೂರ ಮಾಡುತ್ತದೆ.
ಪುರುಷರ ಫಲವತ್ತತೆಯನ್ನು ಹೆಚ್ಚಿಸುತ್ತದೆ.
ನೆನಪಿನ ಶಕ್ತಿ ಹೆಚ್ಚಾಗುತ್ತದೆ.
ನೈಸರ್ಗಿಕವಾಗಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ.




