45 ವರ್ಷಗಳ ಸಿನಿ ಜರ್ನಿಯಲ್ಲಿ ಕೆಜಿಎಫ್ 2 ಅದ್ಭುತ ಸಿನಿಮಾ: ಸಂಜಯ್ ದತ್

ಇಡೀ ಸಿನಿ ಇಂಡಸ್ಟ್ರಿಯಲ್ಲಿ ಸಂಚಲನ ಮೂಡಿಸಿದ್ದ ಕೆಜಿಎಫ್ 2 ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ದೊಡ್ಡ ಮಟ್ಟದಲ್ಲಿ ಸದ್ದು ಮಾಡ್ತಿದೆ. ಟ್ರೈಲರ್ ರಿಲೀಸ್ ಕಾರ್ಯಕ್ರಮಕ್ಕೆ ಬಾಲಿವುಡ್ ನಟ ಸಂಜಯ್ ದತ್, ನಟಿ ರವೀನಾ ಟಂಡನ್ ಆಗಮಿಸಿ ಎಲ್ಲರ ಗಮನ ಸೆಳೆದರು. ರಾಕಿಂಗ್ ಸ್ಟಾರ್ ಯಶ್ ಹಾಗೂ ಮುನ್ನಬಾಯ್ ಸಂಜಯ್ ದತ್ ರನ್ನ ಒಂದೇ ವೇದಿಕೆಯಲ್ಲಿ ನೋಡಿ ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ.ಇದೇ ವೇಳೆ ನಟ ಸಂಜಯ್ ದತ್ ತನ್ನ ಸಿನಿ ಜರ್ನಿಯಲ್ಲಿ ಇಂದೊಂದು ಅತ್ಯುತ್ತಮ ಸಿನಿಮಾ ಎಂದಿದ್ದಾರೆ.
ಟ್ರೈಲರ್ ರಿಲೀಸ್ ಬಳಿಕ ಮಾತನಾಡಿದ ಸಂಜಯ್ ದತ್, “45 ವರ್ಷಗಳ ನನ್ನ ಸಿನಿಜರ್ನಿಯಲ್ಲಿ ಕೆಜಿಎಫ್-2 ಒಂದು ಅದ್ಭುತವಾದ ಪಾಠ. ಸಿನಿಮಾ ಸೆಟ್ನಲ್ಲಿ ಇದ್ದ ಶಿಸ್ತು, ಸಿನಿಮಾ ಮಾಡಬೇಕು ಎಂದು ಈ ತಂಡಕ್ಕೆ ಇರುವ ಗುರಿ ನೋಡಿ ತುಂಬಾ ಖುಷಿಯಾಗುತ್ತೆ. ಈ ತಂಡದಿಂದ ನಾನು ತುಂಬಾ ಕಲಿತಿದ್ದೇನೆ. ಈ ಸಿನಿಮಾ ಕುಟುಂಬದ ರೀತಿ ಎಂದು ಸಂತೋಷವನ್ನು ವ್ಯಕ್ತಪಡಿಸಿದರು.
ಚಿತ್ರದಲ್ಲಿ ಪ್ರತಿಯೊಬ್ಬ ಜೂನಿಯರ್ ಆರ್ಟಿಸ್ಟ್ ಕೂಡ ತುಂಬಾ ಮುಖ್ಯವಾಗಿದ್ದರು. ಎಲ್ಲರನ್ನು ಗೌರವದಿಂದ ನೋಡಿಕೊಳ್ಳುತ್ತಿದ್ದರು. ನನ್ನ ಕೋ ಆರ್ಟಿಸ್ಟ್ ಆಗಿ ಯಶ್ ತುಂಬಾ ಚೆನ್ನಾಗಿ ಬೆಂಬಲ ನೀಡಿದ್ದಾರೆ. ನನ್ನನ್ನು ಪ್ರೀತಿಯಿಂದ ಅಣ್ಣ ಎಂದು ಕರೆದಿದ್ದಾರೆ. ನಾನು ಅವರಿಗೆ ಧನ್ಯವಾದ ಹೇಳುತ್ತೇನೆ ಎಂದರು.
