
ಬೆಂಗಳೂರು: ರಷ್ಯಾ ಮತ್ತು ಉಕ್ರೇನ್ ನಡುವಿನ ಭೀಕರ ಯುದ್ದಕ್ಕೆ ಅನೇಕ ಸೈನಿಕರು, ನಾಗರೀಕರ ತಲೆ ದಂಡವಾಗಿದೆ. ಅದ್ರಲ್ಲಿ ಆಹಾರ ಹುಡುಕಿಕೊಂಡು ಬರಲೆಂದು ಬಂಕರ್ ನಿಂದ ಹೊರಬಂದ ಭಾರತೀಯ ವಿದ್ಯಾರ್ಥಿ ನವೀನ್ ಕೂಡ ಒಬ್ಬ. ಆತ ಮೃತಪಟ್ಟು 9 ದಿನವಾಗಿದೆ. ಕುಟುಂಬದವರ ದುಃಖ ಮಡುಗಟ್ಟಿದೆ. ಉಕ್ರೇನ್ ಶವಗಾರದಲ್ಲಿಯೇ ಆತನ ಶವವಿದೆ. ಇಷ್ಟು ದಿನ ಆದ್ರೂ ಆತನ ಶವ ತರೋಕೆ ನಮ್ಮಿಂದ ಸಾಧ್ಯವಾಗಿಲ್ಲ. ಇದಕ್ಕೆ ಕಾರಣವೇನು ಅಂತ ನೋಡೋದಾದ್ರೆ, ಮೊದಲನೆಯದಾಗಿ ನವೀನ್ ಮೃತಪಟ್ಟಿರೋದು ವಿದೇಶದಲ್ಲಿ. ಅದ್ರಲ್ಲೂ ಯುದ್ದ ಪೀಡಿತ ಸ್ಥಳದಲ್ಲಿ ನವೀನ್ ಮೃತಪಟ್ಟಿರೋದ್ರಿಂದ ಆತನ ಶವ ತರೋದು ಸುಲಭದ ಮಾತಲ್ಲ. ಅಲ್ಲಿನ್ನು ಯುದ್ಧ ಮುಂದುವರೆಯುತ್ತಲೇ ಇದೆ. ನಾರ್ಮಲಾಗಿಯೇ ಮೃತಪಟ್ಟರೂ ಆಸ್ಪತ್ರೆಯಿಂದ ಡೆತ್ ಸರ್ಟಿಫಿಕೇಟ್ ಪಡೆದು ಬಳಿಕ ಎಂಬೆಸಿ ಅನುಮತಿಯೊಂದಿಗೆ ಶವ ತರಬೇಕು.
ಆದ್ರೆ ನವೀನ್ ಮೃತಪಟ್ಟಿರೋದು ಯುದ್ದ ಪೀಡಿತ ದೇಶದಲ್ಲಿ, ಈಗಾಗಲೇ ಭಾರತೀಯ ಎಂಬೆಸಿ ಕೂಡ ಅಲ್ಲಿ ಮುಚ್ಚಲಾಗಿದೆ. ಇನ್ನು ಶವಗಾರದಲ್ಲಿರೋ ಶವಕ್ಕೆ ಸರ್ಟಿಫಿಕೇಟ್ ಕೊಡೋರು ಕೂಡ ಅಲ್ಲಿ ಯಾರು ಇಲ್ಲ. ಬಳಿಕ ಕಾರ್ಗೋ ವಿಮಾನದಲ್ಲಿ ಆತನ ಶವವನ್ನ ತರಬೇಕಿದ್ದು, ಈ ಎಲ್ಲಾ ಪ್ರೊಸಿಜೆರ್ ಫಾಲೋ ಮಾಡ್ಬೇಕು ಅಂದ್ರೆ ಯುದ್ದದ ಭೀಕರತೆ ತಿಳಿಯಾಗಬೇಕು ಅನ್ನೋದು ಕೆಲ ವಿದೇಶಾಂಗ ನೀತಿ ತಜ್ಞರ ಅಭಿಪ್ರಾಯ.
ಇದೀಗ ಯಾವ ರೀತಿ ಬದುಕಿರುವ ವಿದ್ಯಾರ್ಥಿಗಳನ್ನ ಬಾರ್ಡರ್ಗೆ ಕರೆದು ತಂದರೋ ಅದೇ ರೀತಿ ನವೀನ್ ಶವವನ್ನ ಕೂಡ ಬಾರ್ಡರ್ಗೆ ವೆಹಿಕಲ್ ನಲ್ಲಿ ತರಬೇಕಿದೆ. ಅಲ್ಲಿರೋ ಭಾರತೀಯ ಎಂಬೆಸಿ ಪ್ರೊಸಿಜೆರ್ ಮುಗಿಸಿ ಕಳಿಸಕೊಡಬೇಕಿದೆ. ಇನ್ನು ಶವವನ್ನ ಭಾರತೀಯ ಎಂಬೆಸಿಯವರು ಐಡೆಂಟಿಫೈ ಮಾಡಬೇಕಿರುತ್ತೆ. ಇನ್ನು ಖಾರ್ಕಿವ್ ನಗರದಲ್ಲಿ ನವೀನ್ ಶವವಿದ್ದು, ಈ ಭಾಗ ರಷ್ಯಾ ವಶದಲ್ಲಿದ್ದರೆ, ರಷ್ಯಾ ಎಂಬೆಸಿ ಅನುಮತಿ ಪಡೆಯಬೇಕಾಗುತ್ತದೆ. ಇಷ್ಟೆಲ್ಲಾ ಪ್ರೊಸಿಜೆರ್ ಮುಗಿಸಿಕೊಂಡು ನವೀನ್ ಶವ ತರಬೇಕು ಅಂದ್ರೆ ಸುಲಭದ ಮಾತಲ್ಲ. ಯುದ್ದ ತಿಳಿಯಾಗಲೇಬೇಕಿದೆ. ಬಳಿಕವಷ್ಟೆ ನವೀನ್ ಶವ ಭಾರತಕ್ಕೆ ಬರಲಿದೆ.
