
ರಷ್ಯಾ: ಉಕ್ರೇನ್ ಮೇಲೆ ಕ್ರೌರ್ಯ ತೋರುತ್ತಿರುವ ರಷ್ಯಾದ ವಿರುದ್ದ ಹಲವು ರಾಷ್ಟ್ರಗಳು ಈಗಾಗಲೇ ಆರ್ಥಿಕ ನಿರ್ಬಂಧ ಹೇರುತ್ತಿವೆ. ಇದರ ಮಧ್ಯೆ ರಷ್ಯಾದಲ್ಲಿರುವ ತನ್ನ ಎಲ್ಲಾ 850 ರೆಸ್ಟೋರೆಂಟ್ ಗಳನ್ನ ತಾತ್ಕಲಿಕವಾಗಿ ಮುಚ್ಚಲು ಮೆಕ್ ಡೋನಾಲ್ಡ್ ಕಂಪನಿ ಮುಂದಾಗಿದೆ. ಬರ್ಗರ್ ಗೆ ಹೆಸರುವಾಸಿಯಾದ ದೈತ್ಯ ಮೆಕ್ ಡೊನಾಲ್ಡ್ ಕಂಪನಿ ರಷ್ಯಾದಲ್ಲಿ ಸುಮಾರು 62 ಸಾವಿರ ಉದ್ಯೋಗಿಗಳನ್ನ ಹೊಂದಿದೆ. ಅವರೆಲ್ಲರಿಗೂ ವೇತನವನ್ನ ನೀಡಲಾಗುತ್ತದೆ ಎಂದು ಕಂಪನಿ ವ್ಯವಸ್ಥಾಪಕ ತಿಳಿಸಿದ್ದಾರೆ.
ಕೇವಲ ಮೆಕ್ ಡೊನಾಲ್ಡ್ ಮಾತ್ರ ಈ ನಿರ್ಧಾರ ಪ್ರಕಟಿಸಿಲ್ಲ, ಜಾಗತಿಕ ಬ್ರಾಂಡ್ ಹಾಗೂ ಅಮೆರಿಕದ ಕಾರ್ಪೋರೇಟ್ ಕ್ಷೇತ್ರದ ಚಿಹ್ನೆಗಳಾದ McDonald’s, Starbucks, Coca-Cola, PepsiCo ಮತ್ತು General Electric ರಷ್ಯಾದಲ್ಲಿ ತಮ್ಮ ವ್ಯವಹಾರಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಘೋಷಿಸಿವೆ. ಈಗಾಗಲೇ ಉಕ್ರೇನ್ ನಲ್ಲಿ 100 ರೆಸ್ಟೋರೆಂಟ್ ಗಳನ್ನ ಮೆಕ್ ಡೊನಾಲ್ಡ್ ತಾತ್ಕಲಿಕವಾಗಿ ಮುಚ್ಚಿದೆ. ಅದಾಗ್ಯೂ ಅಲ್ಲಿದ್ದ ನೌಕರರಿಗೆ ವೇತನ ನೀಡಲು ಮುಂದಾಗಿದ್ದು, ದೊಡ್ಡ ಮಟ್ಟದ ಆರ್ಥಿಕ ಹೊಡೆತವನ್ನ ಮೆಕ್ ಡೊನಾಲ್ಡ್ ಎದುರಿಸಬೇಕಾಗುತ್ತದೆ.
