ಸೆನ್ಸಾರ್ ಮಂಡಳಿಯಿಂದ ಕೆಜಿಎಫ್-2 ಗೆ ಯು/ಎ ಸರ್ಟಿಫಿಕೇಟ್

ಬೆಂಗಳೂರು: KGF ಚಾಪ್ಟರ್ 1 ಪ್ಯಾನ್ ಇಂಡಿಯಾದಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು. ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಈ ಚಿತ್ರ ಭಾರಿ ಸದ್ದು ಮಾಡಿತ್ತು, ಇದೀಗ KGF ಚಾಪ್ಟರ್ 2 ಭಾರಿ ನಿರೀಕ್ಷೆ ಮೂಡಿಸಿದೆ. ಈ ಸಿನಿಮಾದಲ್ಲಿ ರವೀನಾ ಟಂಡನ್, ಸಂಜಯ್ ದತ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ತೆಲುಗು ನಟ ರಾವು ರಮೇಶ್ ಕೂಡಾ ಪ್ರಧಾನ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ.
ಎಲ್ಲ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗಾಗಲೇ ಸಿನಿಮಾ ಬೆಳ್ಳಿಪರದೆ ಮೇಲೆ ಬರಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಸಿನಿಮಾ ಮುಂದೂಡಲಾಗಿತ್ತು. ಸದ್ಯ ಸಿನಿಮಾ ಏಪ್ರಿಲ್ 14ಕ್ಕೆ ರಿಲೀಸ್ ಆಗುತ್ತಿದೆ. ಇತ್ತೀಚೆಗೆ ಈ ಸಿನಿಮಾದ ಟ್ರೈಲರ್ ರಿಲೀಸ್ ಆಗಿ ಚಿಂದಿ ಉಡಾಯಿಸಿದೆ. ಎಲ್ಲಾ ಭಾಷೆಗಳಲ್ಲೂ ಸೇರಿ 24 ಗಂಟೆಗಳಲ್ಲಿ 110 ಮಿಲಿಯನ್ ವ್ಯೂಸ್ ಬಂದಿದೆ. ಈ ಮೂಲಕ ಭಾರತೀಯ ಸಿನಿಮಾ ಇತಿಹಾಸದಲ್ಲಿ ಹೊಸದೊಂದು ರೆಕಾರ್ಡ್ ಸೃಷ್ಟಿ ಮಾಡಿದೆ.
ಅಂದಹಾಗೆ ಈ ಸಿನಿಮಾ ಸೆನ್ಸಾರ್ ಮಂಡಳಿಯಿಂದ ಪಾಸ್ ಆಗಿದೆ. ಇದಕ್ಕೆ ಯು/ಎ ಸರ್ಟಿಫಿಕೇಟ್ ನೀಡಿದೆ. ಒಟ್ಟಾರೆಯಾಗಿ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಯಾವ ರೀತಿ ಧೂಳೆಬ್ಬಿಸುತ್ತದೆ ಎಂಬುದುನ್ನು ಕಾದು ನೋಡಬೇಕಿದೆ.
