Breaking NewsLatestಇತರ ಕ್ರೀಡೆಕ್ರೀಡೆ

ಏಷ್ಯನ್ ಚಾಂಪಿಯನ್ಷಿಪ್: ಮನಿಕಾ ಔಟ್, ಅರ್ಚನಾ ಇನ್

ಹೊಸದಿಲ್ಲಿ: ರಾಷ್ಟ್ರೀಯ ಶಿಬಿರದಲ್ಲಿ ಪಾಲ್ಗೊಂಡಿಲ್ಲ ಎಂಬ ಕಾಣಕ್ಕಾಗಿ ಭಾರತದ ಶ್ರೇಷ್ಠ ಟೇಬಲ್ ಟೆನಿಸ್ ಆಟಗಾರ್ತಿ ಮನಿಕಾ ಬಾತ್ರ ಅವರನ್ನು ದೋಹಾದಲ್ಲಿ ನಡೆಯಲಿರುವ ಏಷ್ಯನ್ ಚಾಂಪಿಯನ್ಷಿಪ್ ನಿಂದ ಕೈ ಬಿಡಲಾಗಿದೆ. ಕರ್ನಾಟಕದ ಅರ್ಚನಾ ಕಾಮತ್ ಅವರು ಆಯ್ಕೆಯಾಗಿರುವುದು ಕನ್ನಡಿಗರ ಹೆಮ್ಮೆ.

ಟೋಕಿಯೋ ಒಲಿಂಪಿಕ್ಸ್ ನಲ್ಲಿ ಕೋಚ್ ಮಾಡಿದ ಪ್ರಮಾದಕ್ಕೆ ಪ್ರತಿಯಾಗಿ ಅವರಿಂದ ದೂರವಾಗಿ ವಿಚಾರಣೆಗೆ ಒಳಗಾಗಿದ್ದ ಮನಿಕಾ ಆ ನಂತರ ತಮ್ಮ ನಿರ್ಧಾರಕ್ಕೆ ಕಾರಣವನ್ನು ತಿಳಿಸಿದ್ದರು. ಒಲಿಂಪಿಕ್ಸ್ ಅರ್ಹತಾ ಪಂದ್ಯದಲ್ಲಿ ಕೋಚ್ ತನ್ನ ಆಟಗಾರ್ತಿಯನ್ನು ಒಲಿಂಪಿಕ್ಸ್ ಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಪಂದ್ಯ ಕೈ ಬಿಡುವಂತೆ ಸೂಚಿಸಿದ್ದಾರೆಂದು ಮನಿಕಾ ಆರೋಪಿಸಿದ್ದು. ಅಂಥ ಕೋಚ್ ನೀಡುವ ತರಬೇತಿ ಅಗತ್ಯವಿಲ್ಲ ಎಂದೂ ಹೇಳಿದ್ದರು.

ಏಷ್ಯನ್ ಚಾಂಪಿಯನ್ಷಿಪ್ ಗೆ ನಡೆಸುವ ರಾಷ್ಟ್ರೀಯ ಶಿಬಿರದಲ್ಲಿ ಪಾಲ್ಗೊಳ್ಳುವವರು ಮಾತ್ರ ಚಾಂಪಿಯನ್ಷಿಪ್ ಗೆ ಆಯ್ಕೆಯಾಗುತ್ತಾರೆ ಎಂದು ಭಾರತೀಯ ಟೇಬಲ್ ಟೆನಿಸ್ ಫೆಡರೇಷನ್ ಮೊದಲೇ ತಿಳಿಸಿತ್ತು. ಆದರೆ ತಾನು ಪುಣೆಯಲ್ಲಿ ತನ್ನ ವೈಯಕ್ತಿಕ ಕೋಚ್ ಅವರಿಂದ ತರಬೇತಿ ಪಡೆಯುವುದಾಗಿ ಮನಿಕಾ ಕೂಡ ಮೊದಲೇ ತಿಳಿಸಿದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button