Breaking NewsLatestಆರೋಗ್ಯಮೆಟ್ರೋರಾಜ್ಯಶಿವಮೊಗ್ಗಸುದ್ದಿ

ರಾಜ್ಯದಲ್ಲಿ ರಾತ್ರಿಕರ್ಫ್ಯೂ ಗೆ, ಪೊಲೀಸರೊಂದಿಗೆ ಸಹಕರಿಸಿ: ಗೃಹ ಸಚಿವ ಜ್ಞಾನೇಂದ್ರ ಮನವಿ

ಶಿವಮೊಗ್ಗ: ರಾಜ್ಯದಲ್ಲಿ ನೈಟ್ ಕರ್ಫ್ಯೂ ಇಂದು ರಾತ್ರಿ10 ಗಂಟೆಯಿಂದ ಜಾರಿಗೆ ಬರಲಿದ್ದು, ಸಾರ್ವಜನಿಕ ಹಿತದೃಷ್ಟಿಯಿಂದ ತೆಗೆದುಕೊಂಡ ಅನಿವಾರ್ಯ ನಿಭಂದನೆಯನ್ನು ರಾಜ್ಯದ ಜನತೆ ಪಾಲಿಸಬೇಕೆಂದು, ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ಮನವಿ ಮಾಡಿದ್ದಾರೆ. ರೂಪಾಂತರ ಒಮಿಕ್ರಾನ್ ವೈರಾಣು, ವಿಶ್ವದ ಹಲವು ರಾಷ್ಟ್ರಗಳನ್ನು ಬಾದಿಸಿದ್ದು, ಬದುಕು ಹಾಗೂ ಆರ್ಥಿಕತೆಗೆ ಆತಂಕ ತಂದಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ರಾಜ್ಯದಲ್ಲಿ ತಜ್ಞರ ಸಲಹೆ ಸೂಚನೆಯಂತೆ, ನೈಟ್ ಕರ್ಫ್ಯೂ ವಿಧಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಈ ಸಂಬಂಧ ವಾಗಿ, ಸಾರ್ವಜನಿಕರು, ಪೊಲೀಸರ ಜೊತೆಗೆ ಸಹಕರಿಸಬೇಕು, ಎಂದು ಸಚಿವರು ಮನವಿ ಮಾಡಿದ್ದಾರೆ.

ರಾಜ್ಯದ ಜನತೆ ಕೋರೋನ ಕಾರಣದಿಂದ ಈಗಾಗಲೇ, ಆರ್ಥಿಕವಾಗಿ ಜರ್ಝರಿತ ವಾಗಿದ್ದು, ಚೇತರಿಕೆಯ ಹಾದಿಯಲ್ಲಿದ್ದಾಗ ಮತ್ತೆ ನೈಟ್ ಕರ್ಫ್ಯೂ ನಿಬಂಧನೆಗೆ  ಒಳಗಾಗುತ್ತಿರುವುದು, ಸಂತೋಷದಾಯಕ ವಿಷಯವಲ್ಲ, ಆದರೆ ಸಾರ್ವಜನಿಕ ಹಿತದೃಷ್ಟಿಯಿಂದ ತೆಗೆದುಕೊಂಡಿರುವ ಈ ನಿರ್ಧಾರವನ್ನು ಪಾಲಿಸಲೇ ಬೇಕು ಎಂದು ಸಚಿವ ಆರಗ ಜ್ಞಾನೇಂದ್ರ   ಮನವಿ ಮಾಡಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button