Latestಕೃಷಿಜಿಲ್ಲಾ ಸುದ್ದಿಮೈಸೂರು
ನಕಲಿ ನಂದಿನಿ ತುಪ್ಪ ತಯಾರಿಕೆ ಪ್ರಕರಣ: ರಾಜ್ಯವ್ಯಾಪಿ ಪ್ರತಿಭಟನೆಗೆ ರೈತ ಸಂಘ ಕರೆ
ಮೈಸೂರು ; ನಕಲಿ ನಂದಿನಿ ತುಪ್ಪ ತಯಾರಿಕೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಡೈರಿಗಳಲ್ಲಿ ಕಚ್ಚಾ ಹಾಲು ಮಾರಾಟ ನಿರ್ಬಂಧ ವಿರೋಧಿಸಿ ಇದೇ ಡಿ.30 ರಂದು ಪ್ರತಿಭಟನೆ ನಡೆಸಲು ರಾಜ್ಯ ರೈತ ಸಂಘ ಕರೆ ನೀಡಿದೆ. ಅಂದು ಮೈಸೂರು ಜಿಲ್ಲಾಧಿಕಾರಿ ಕಚೇರಿ ಮುಂದೆ ರಾಜ್ಯ ರೈತ ಸಂಘ ಪ್ರತಿಭಟನೆ ನಡೆಯಲಿದೆ. ನಂದಿನಿ ತುಪ್ಪ ಕಲಬೆರಕೆ ಆಗಿರೋದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಹಗರಣದಲ್ಲಿ ಹಲವು ಮೈಮುಲ್ ಅಧಿಕಾರಿಗಳು ಭಾಗಿಯಾಗಿರುವ ಶಂಕೆ ಇದೆ ಎಂದು ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.
ಜನವರಿ 1ರಿಂದ ಡೈರಿಗಳಲ್ಲಿ ಸ್ಥಳೀಯ ಕಚ್ಚಾ ಹಾಲು ಮಾರಾಟ ನಿಷೇಧಿಸಿರುವುದು ಖಂಡನೀಯ. ಇದರಿಂದ ಹಾಲು ಉತ್ಪಾದಕರಿಗೆ ಹೊಡೆತ ಬೀಳಲಿದೆ. ಹಾಗಾಗಿ ಈ ಎಲ್ಲಾ ವಿಚಾರಗಳ ಕುರಿತು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ.



