Breaking NewsLatestಮನರಂಜನೆಸಿನಿಮಾಸ್ಯಾಂಡಲ್ ವುಡ್

ಟಾಲಿವುಡ್ ನಿತಿನ್​ ಗೆ ಜೋಡಿಯಾದ ಕಿಸ್ ಬೆಡಗಿ

ಸ್ಯಾಂಡಲ್​ವುಡ್ ಚಿತ್ರರಂಗದಿಂದ ಕಾಲಿಟಿದ್ದ ಕಿಸ್ ಬೆಡಗಿ ಶ್ರೀಲೀಲಾ ಇದೀಗ ಟಾಲಿವುಡ್ ಅಂಗಳದಲ್ಲಿ ಸಖತ್ ಸೌಂಡ್ ಮಾಡುತ್ತಿದ್ದಾರೆ. ಮೊದಲ ಸಿನಿಮಾದಲ್ಲೇ ಸಂಚಲನ ಮೂಡಿಸಿದ್ದ ಅವರು, ಕೆಲವೇ ಸಮಯದಲ್ಲಿ ಹಲವು ಭಾಷೆಗಳ ಸಿನಿಮಾ ರಂಗ ಪ್ರವೇಶಿಸಿ ಅಚ್ಚರಿ ಮೂಡಿಸಿದ್ದಾರೆ.

ಸಾಮಾನ್ಯವಾಗಿ ಕನ್ನಡದಲ್ಲಿ ನಟ-ನಟಿಯರಿಗೆ ಅವಕಾಶ ಕಡಿಮೆಯಾದಾಗ ಮಾತ್ರ ಬೇರೆ ಸಿನಿಮಾ ಕಡೆ ಮುಖಮಾಡುತ್ತಾರೆ. ಆದರೆ ಶ್ರೀಲೀಲಾ ಅವರು ಕನ್ನಡದ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವಾಗಲೇ ಬೇರೆ ಭಾಷೆಗಳಿಂದ ಆಫರ್ ಬಂದಿದೆ. ತೆಲುಗಿನ ಪೆಳ್ಳಿ ಸಂದಡಿ ಚಿತ್ರದ ನಂತರ ಟಾಲಿವುಡ್ ನಟ ನಿತಿನ್‌ಗೆ ನಾಯಕಿಯಾಗಿ ಶ್ರೀಲೀಲಾ ಆಯ್ಕೆಯಾಗಿದ್ದಾರೆ.

ತೆಲುಗಿನ ಟ್ಯಾಲೆಂಟೆಡ್ ಆಕ್ಟರ್ ನಿತಿನ್ ನಟನೆಯ ಹೊಸ ಚಿತ್ರದಲ್ಲಿ ಶ್ರೀಲೀಲಾ ನಾಯಕಿಯಾಗಿ ನಟಿಸಲಿದ್ದಾರೆ. ವಕ್ಕಂತ ವಂಶಿ ನಿರ್ದೇಶನದ ಚಿತ್ರದಲ್ಲಿ ನಿತಿನ್‌ಗೆ ಭರಾಟೆ ಕ್ವೀನ್ ನಾಯಕಿಯಾಗಿ ಫಿಕ್ಸ್ ಆಗಿದ್ದಾರೆ. ಇದೊಂದು ಪಕ್ಕಾ ರೊಮ್ಯಾಂಟಿಕ್ ಲವ್‌ಸ್ಟೋರಿ ಚಿತ್ರವಾಗಿದ್ದು, ನಿತಿನ್ ಲವರ್‌ಬಾಯ್ ಲುಕ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟಿ ಶ್ರೀಲೀಲಾ ವಿಭಿನ್ನ ಪಾತ್ರದ ಮೂಲಕ ಮೋಡಿ ಮಾಡಲಿದ್ದಾರಂತೆ.

Spread the love

Related Articles

Leave a Reply

Your email address will not be published. Required fields are marked *

Back to top button