Breaking NewsLatestರಾಜ್ಯರಾಷ್ಟ್ರೀಯವಿದೇಶಸುದ್ದಿ

ರೊಮೇನಿಯಾದಿಂದ ದೆಹಲಿ ತಲುಪಿದ ಆಪರೇಷನ್ ಗಂಗಾ 9 ನೇ ವಿಮಾನ

ನವದೆಹಲಿ: ಆಪರೇಷನ್ ಗಂಗಾ 9ನೇ ವಿಮಾನವು ರೋಮೇನಿಯಾದ ಬುಕಾರೆಸ್ಟ್ ನಿಂದ ನವದೆಹಲಿ ತಲುಪಿದೆ. ಅದರಲ್ಲಿ  ಯುದ್ಧಪೀಡಿತ ಉಕ್ರೇನ್ ನಲ್ಲಿ ಸಿಲುಕಿದ್ದ 218 ಭಾರತೀಯ ಪ್ರಯಾಣಿಕರಿದ್ದರು. ಆಪರೇಷನ್ ಗಂಗಾ ಅಡಿ 1,400ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಈಗಾಗಲೇ ಯುದ್ಧ ಪೀಡಿತ ಉಕ್ರೇನ್ ನಿಂದ ಸ್ಥಳಾಂತರಿಸಲಾಗಿದೆ.

ಉಕ್ರೇನ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಕಳೆದ ಫೆ.24ರಿಂದ ರಾಯಭಾರ ಕಚೇರಿ ಬಳಿ ನೆಲೆಸಿರುವ 400 ವಿದ್ಯಾರ್ಥಿಗಳು ಮಿಷನ್ ಪ್ರಯತ್ನಗಳ ಮೂಲಕ ರೈಲಿನಲ್ಲಿ ಕೈವ್ ನಿಂದ ಯಶಸ್ವಿಯಾಗಿ ಹೊರಟಿದ್ದಾರೆ ಎಂದು ಹೇಳಿದೆ. ಕೈವ್ ನಿಂದ ಪಶ್ಚಿಮ ಉಕ್ರೇನ್ ಕಡೆಗೆ 1 ಸಾವಿರಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳ ಚಲನೆಯನ್ನು ಅದು ಖಚಿತಪಡಿಸಿದೆ. ಕರ್ಫ್ಯೂ ತೆರೆವುಗೊಂಡ ನಂತರ ಕೈವ್ ನಲ್ಲಿರುವ ಉಳಿದ ಕೆಲವು ವಿದ್ಯಾರ್ಥಿಗಳಿಗೆ ಉಕ್ರೇನ್ ನಲ್ಲಿರುವ ಭಾರತೀಯ ಮಿಷನ್ ತೊರೆಯುವಂತೆ ಸಲಹೆ ನೀಡಿದೆ.

Spread the love

Related Articles

Leave a Reply

Your email address will not be published. Required fields are marked *

Back to top button