ದರ್ಗಾದಲ್ಲಿ ಶಿವಲಿಂಗ; ಬೂದಿ ಮುಚ್ಚಿದ ಕೆಂಡದಂತಾದ ಆಳಂದ ಪಟ್ಟಣ

ಕಲಬುರಗಿ: ಜಿಲ್ಲೆಯ ಆಳಂದ ಪಟ್ಟಣದಲ್ಲಿ ಅಕ್ಷರಶಃ ಬೂದಿ ಮುಚ್ಚಿದ ಕೆಂಡದಂತ ಪರಸ್ಥಿತಿ ನಿರ್ಮಾಣವಾಗಿದೆ. ನಿಷೇದಾಜ್ಞೆ ನಡುವೆಯೂ ಆಳಂದನಲ್ಲಿ ತಲವಾರಗಳು ಝಳಪಿಸುತ್ತಿವೆ.
ಆಳಂದ ಪಟ್ಟಣದ ಲಾಡ್ಲೆಮಶಾಕ್ ದರ್ಗಾ ಸುತ್ತಮುತ್ತ ಅಲ್ಪಸಂಖ್ಯಾತ ಸಮುದಾಯದ ನೂರಾರು ಯುವಕರು ತಲವಾರ ಹಿಡಿದು ಒಡಾಡುತ್ತಿದ್ದಾರೆ. ಹಲವಡೆ ಮಾರಕಾಸ್ತ್ರಗಳೊಂದಿಗೆ ಅಡಗಿ ಕುಳಿತಿದ್ದಾರೆ. ಇಂದು ದರ್ಗಾ ದಲ್ಲಿರುವ ಶಿವಲಿಂಗಕ್ಕೆ ಶುದ್ಧಿ ಹಾಗೂ ಪೂಜೆಗೆ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಆಗಮಿಸುತ್ತಿರುವ ಹಿನ್ನಲೆ ಅಲ್ಪಸಂಖ್ಯಾತ ಮಹಿಳೆಯರು ಮಕ್ಕಳು ಸೇರಿ ಎಲ್ಲರೂ ದರ್ಗಾ ಬಳಿ ಸೇರಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ಆಳಂದನಲ್ಲಿ ನಿಷೇದಾಜ್ಞೆ ಜಾರಿ ಮಾಡಲಾಗಿದೆ. ಸ್ಥಳದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಿದ್ದಾರೆ. ಆಳಂದ ಪರಿಸ್ಥಿತಿ ಸದ್ಯ ಅಕ್ಷರಶಃ ಬೂದಿ ಮುಚ್ಚಿದ ಕೆಂಡದಂತಿದೆ.ಇನ್ನೊಂದಡೆ ದರ್ಗಾದತ್ತ ಹೊರಟ್ಟಿದ್ದ ಹಿಂದುಪರ ಕಾರ್ಯಕರ್ತರನ್ನು ಪೊಲೀಸರು ತಡೆಯುತ್ತಿದ್ದಾರೆ. ಹಲವು ತಂಡಗಳಾಗಿ ದರ್ಗಾದತ್ತ ಆಗಮಿಸಲು ಹಿಂದು ಕಾರ್ಯಕರ್ತರು ಪ್ರಯತ್ನ ಮಾಡುತ್ತಿದ್ದಾರೆ.
ಸಿದ್ದಲಿಂಗ್ ಸ್ವಾಮೀಜಿ ವಶಕ್ಕೆ
ಪ್ರವೇಶ ನಿಷೇಧದ ಮಧ್ಯೆಯೂ ಆಳಂದ ಪಟ್ಟಣಕ್ಕೆ ಹೊರಟ್ಟಿದ್ದ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಲಬುರಗಿ ಹೊರವಲಯದ ಕೋಟನೂರು ಬಳಿ ಶ್ರೀಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಾಂತಿ ಸುವ್ಯವಸ್ಥೆ ಕಾಪಾಡೋ ನಿಟ್ಟಿನಲ್ಲಿ ಆಳಂದ ಪಟ್ಟಣ ಪ್ರವೇಶಕ್ಕೆ ಸ್ವಾಮೀಜಿಗೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ.



