Breaking NewsLatestವಿದೇಶಸುದ್ದಿ
Zain Nadella: ಮೈಕ್ರೋಸಾಫ್ಟ್ CEO ಸತ್ಯ ನಾದೆಲ್ಲಾ ಪುತ್ರ ಝೈನ್ ನಾದೆಲ್ಲಾ ನಿಧನ

ವಾಷಿಂಗ್ಟನ್ : ಮೈಕ್ರೋಸಾಪ್ಟ್ ಸಿಇಓ ಸತ್ಯ ನಾದೆಲ್ಲ ಅವರ ಮಗ ಝೈನ್ ನಾದೆಲ್ಲ (26 ವರ್ಷ) ಸೋಮವಾರ ಬೆಳಿಗ್ಗೆ ನಿಧನರಾಗಿದ್ದಾರೆ.
ಹೈದರಾಬಾದ್ ಮೂಲಕ ಸತ್ಯ ನಾದೆಲ್ಲಾ ಹಾಗೂ ಅನುಪಮಾ ದಂಪತಿಯ ಮಗ ಝೈನ್ ನಾದೆಲ್ಲಾ ಅವರು ಹುಟ್ಟಿನಿಂದಲೂ ಸೆರೆಬ್ರಲ್ ಪಾಲ್ಸಿ ಸಮಸ್ಯೆಯಿಂದ (ಮೆದುಳಿನ ನರಕ್ಕೆ ಸಂಬಂಧಿಸಿದ ಕಾಯಿಲೆ) ಬಳಲುತ್ತಿದ್ದರು.
ಝೈನ್ ನಾದೆಲ್ಲಾ ಅವರ ಸಾವಿನ ಸುದ್ದಿಯನ್ನು ಮೈಕ್ರೋಸಾಫ್ಟ್ ಕಂಪನಿಯು ಇಮೇಲ್ ಮೂಲಕ ತನ್ನ ಉನ್ನತ ಸಿಬ್ಬಂದಿಗೆ ಝೈನ್ ನಿಧನರಾಗಿರುವ ವಿಚಾರವನ್ನು ತಿಳಿಸಿದೆ. ಮೈಕ್ರೋಸಾಫ್ಟ್ ಕಾರ್ಯನಿರ್ವಾಹಕರು ಸತ್ಯ ನಡೆಲ್ಲಾ ಅವರ ಕುಟುಂಬಕ್ಕೆ ಮಗನ ಸಾವಿನ ನೋವಿನ್ನು ತಡೆಯುವ ಶಕ್ತಿ ನೀಡಲಿ ಎಂದು ಮೇಲ್ನಲ್ಲಿ ಹೇಳಲಾಗಿದೆ.
1992ರಲ್ಲಿ ವಿವಾಹವಾದ ಸತ್ಯ ಮತ್ತು ಅನುಪಮಾ ದಂಪತಿಗೆ ಒಟ್ಟು ಮೂವರು ಮಕ್ಕಳು. ಅವರ ಏಕೈಕ ಗಂಡು ಮಗ ಝೈನ್ ಅವರು ಸೆರೆಬ್ರಲ್ ಪಾಲ್ಸಿ ಕಾಯಿಲೆಯಿಂದ ಬಳಲುತ್ತಿದ್ದು, ಅವರ ದೃಷ್ಟಿ ಸಮಸ್ಯೆಗೆ ತುತ್ತಾಗಿದ್ದರು. ಸತ್ಯ ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ.
