Breaking NewsLatestವಿದೇಶಸುದ್ದಿ

Russia-Ukraine Crisis : ಕೂಡಲೇ ಕೀವ್‌ ನಗರ ತೊರೆಯಲು ಭಾರತೀಯರಿಗೆ ಸೂಚನೆ

ಕೀವ್​​ : ಉಕ್ರೇನ್‌ ರಾಜಧಾನಿ ಕೀವ್‌ ನಗರದಲ್ಲಿ ರಷ್ಯಾ ಬಾಂಬು ಗುಂಡಿನ ಮಳೆಗರೆಯುತ್ತಿದೆ. ಈ ಹಿನ್ನೆಲೆಯಲ್ಲಿ ಕೀವ್‌ನಲ್ಲಿರುವ ಭಾರತೀಯರು ತಕ್ಷಣವೇ ನಗರ ತೊರೆಯುವಂತೆ ಅಲ್ಲಿನ ಭಾರತೀಯ ರಾಯಭಾರ ಕಚೇರಿ ಸೂಚನೆ ನೀಡಿದೆ.

ವಿದ್ಯಾರ್ಥಿಗಳೂ ಸೇರಿದಂತೆ ಎಲ್ಲ ಭಾರತೀಯರೂ ಇಂದೇ ತುರ್ತಾಗಿ ಕೀವ್ ತೊರೆಯಬೇಕು. ರೈಲುಗಳ ಮೂಲಕ ಅಥವಾ ಲಭ್ಯವಿರುವ ಇತರ ಯಾವುದೇ ವ್ಯವಸ್ಥೆಯನ್ನು ಬಳಸಿಕೊಂಡು ನಗರ ತೊರೆಯಬೇಕು ಎಂದು ರಾಯಭಾರ ಕಚೇರಿ ಟ್ವೀಟ್ ಮಾಡಿದೆ.

ರಷ್ಯಾ ಹಾಗೂ ಉಕ್ರೇನ್ ನಡುವೆ ಸೋಮವಾರ ನಡೆದ ಮಾತುಕತೆಯಲ್ಲಿ ಒಮ್ಮತಕ್ಕೆ ಬರುವುದು ಸಾಧ್ಯವಾಗಿಲ್ಲ. ಇದರ ಬೆನ್ನಲ್ಲೇ ರಷ್ಯಾ ದಾಳಿ ಮುಂದುವರಿಸಿದೆ.

ಹಾರ್ಕಿವ್‌ ನಗರದ ಮೇಲೆ ಇಂದು ಶೆಲ್‌ ದಾಳಿ ಆರಂಭಿಸಿದೆ. ರಷ್ಯಾ ಪಡೆಗಳು ರಾಜಧಾನಿ ಕೀವ್ ಸಮೀಪಿಸಿವೆ ಎಂದೂ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಸುರಕ್ಷತೆ ಹಿನ್ನೆಲೆ ಭಾರತೀಯರು ಕೀವ್‌ ನಗರವನ್ನ ತೊರೆದು ಸಿಕ್ಕ ಸಿಕ್ಕ ವಾಹನಗಳನ್ನ ಬಿಟ್ಟು ಹೊರಡುವಂತೆ ಸೂಚನೆ ನೀಡಿದೆ

Spread the love

Related Articles

Leave a Reply

Your email address will not be published. Required fields are marked *

Back to top button