Breaking NewsLatestಕಲಬುರ್ಗಿಕ್ರೈಂಜಿಲ್ಲಾ ಸುದ್ದಿರಾಜ್ಯಸುದ್ದಿ
ಪಿಎಸ್ಐ ನೇಮಕಾತಿ ಅಕ್ರಮ; ಬಂಧಿತ ಆರೋಪಿ ಆರ್.ಡಿ. ಪಾಟೀಲ್ ಪೊಗರು!

ಕಲಬುರಗಿ: ಪಿಎಸ್ ಐ ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ಭಾಗಿಯಾದ ಆರೋಪದಡಿ ಸಿಐಡಿ ಖೆಡ್ಡಾಗೆ ಬಿದ್ದಿರುವ ಆರ್ ಡಿ ಪಾಟೀಲ್ ಪೋಗರು ಮಾತ್ರ ಕಡಿಮೆ ಆಗಿಲ್ಲ.
ಮಾಧ್ಯಮಗಳ ಕ್ಯಾಮರಾ ನೋಡ್ತಿದ್ದಂತೆ ಫ್ರೀ ಆಫ್ ಕಾಸ್ಟ್ ಪ್ರಚಾರ ಕೊಡ್ತಿದ್ದೀರಾ? ಅಂತಾ ಧಿಮಾಕಿನ ಮಾತಿನೊಂದಿಗೆ ಕ್ಯಾಮರಾಗೆ ಹೆಬ್ಬೆಟ್ಟು ತೋರಿಸಿ ಸಿಐಡಿ ಕಚೇರಿ ಒಳಗೆ ಆರೋಪಿ ಆರ್ ಡಿ ಪಾಟೀಲ್ ತೆರಳಿದ್ದಾನೆ.
ವಿಚಾರಣೆಯಿಂದ ಕಚೇರಿಗೆ ಬಂದು ಕಾರು ಇಳಿಯುತ್ತಿದ್ದಂತೆ ಡೈಲಾಗ್ ಹೊಡೆದ ಆರ್‌ಡಿ ಪಾಟೀಲ್ ಅಕ್ರಮದ ಪ್ರಮುಖ ಕಿಂಗ್ ಪಿನ್ ಎನ್ನಲಾಗಿದೆ. ನಿನ್ನೆ ಮಹಾರಾಷ್ಟ್ರದಲ್ಲಿ ಅರೆಸ್ಟ್ ಮಾಡಿ ಕಲಬುರಗಿಗೆ ತಡರಾತ್ರಿ ಕರೆತರಲಾಗಿದೆ.
