‘ಬ್ಲೂಟೂತ್ ಡಿವೈಸ್’ ವಿಡಿಯೋ ನೀಡಿದ ಸುಳಿವು: ಪಿಎಸ್ಐ ಮಾತ್ರವಲ್ಲ ಇತರೆ ಇಲಾಖೆ ಎಕ್ಸಾಂನಲ್ಲೂ ಅಕ್ರಮ!

ಕಲಬುರಗಿ: ಪಿಎಸ್ಐ ಎಕ್ಸಾಮ್ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದ್ದು ಎನ್ನಲಾದ ‘ಡಿವೈಸ್ ಬಳಿಸಿ ಉತ್ತರ ಹೇಳುವ’ ವಿಡಿಯೋಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಈ ವಿಡಿಯೋ ಪಿಎಸ್ಐ ಪರೀಕ್ಷೆಯದಲ್ಲ ಇತ್ತೀಚಿಗೆ ನಡೆದ ಪಿಡಬ್ಲೂಡಿ ಜ್ಯೂನಿಯರ್ ಇಂಜಿನಿಯರ್ ಪರೀಕ್ಷೆಗೆ ಸಂಬಂಧಿಸಿದು ಅನ್ನೋ ಸತ್ಯ ಹೊರಬಿದ್ದಿದೆ.
ವಿಡಿಯೋ ಆಧಾರದಲ್ಲಿ ನೋಡಿದ್ರೆ ಪಿಎಸ್ಐ, ಕಾನ್ಸಟೇಬಲ್ ,ಕೆಪಿಎಸ್ಸಿ ಜೊತೆ ಪಿಡಬ್ಲೂಡಿನಲ್ಲಿಯೂ ಅಕ್ರಮ ನಡೆದಿದೆ ಅನ್ನೋದು ಖಚಿತಗೊಂಡಿದೆ. ಬ್ಲೂಟೂತ್ ಬಳಸಿ ಉತ್ತರ ನೀಡುತ್ತಿರುವ ವಿಡಿಯೋ ಇಂದು ಬೆಳಕಿಗೆ ಬಂದಿತ್ತು. ಆರಂಭದಲ್ಲಿ ಇದು ಪಿಎಸ್ಐ ಪರೀಕ್ಷೆಗೆ ಸಂಬಂಧಿಸಿದ್ದು ಎನ್ನಲಾಗಿತ್ತು. ಆದ್ರೆ ಪರೀಶಿಲಿಸಿ ನೋಡಿದಾಗ ಉತ್ತರಗಳು ಪಿಡಬ್ಲೂಡಿ ಜ್ಯೂನಿಯರ್ ಇಂಜಿನಿಯರ್ ಪರೀಕ್ಷೆಗೆ ಸಂಬಂಧಿಸಿದ್ದವಾಗಿವೆ. 2021ರ ಡಿಸೆಂಬರ್ 13 ರಲ್ಲಿ ಜೂನಿಯರ್ ಇಂಜನಿಯರ್ ಎಕ್ಸಾಮ್ ನಡೆದಿತ್ತು..
ಒಟ್ಟಿನಲ್ಲಿ ಪಿಎಸ್ಐ ಎಕ್ಸಾಮ್ ಅಕ್ರಮ ಪ್ರಕರಣ ಬೆನ್ನತಿದ್ದ ಸಿಐಡಿ ಪೋಲಿಸರಿಗೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿರುವುದು ಪೊಲೀಸರನ್ನ ಶಾಕ್ಗೆ ದೂಡಿದೆ
