ಪ್ರಧಾನಿ ಘೋಷಣೆ ಸಾಲದು; ಸಂಸತ್ತಿನಲ್ಲಿ ಕೃಷಿ ಕಾನೂನು ರದ್ದಾದ ಬಳಿಕವಷ್ಟೇ ರೈತಹೋರಾಟ ನಿಲ್ಲಲಿದೆ: ರಾಕೇಶ್ ಟಿಕಾಯತ್

ನವದೆಹಲಿ: ವಿವಾದಾತ್ಮಕ ಕೃಷಿ ಮಸೂದೆಗಳನ್ನು ಹಿಂಪಡೆಯುವ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರಷ್ಟೇ. ಆದರೆ ಸಂಸತ್ತಿನಲ್ಲಿ ಈ ನಿರ್ಧಾರವನ್ನು ಅಂಗೀಕರಿಸಿದ ಬಳಿಕವೇ ರೈತ ಹೋರಾಟ ನಿಲ್ಲಲಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ಹೇಳಿದ್ದಾರೆ.
ಘೋಷಣೆ ಹೊರಬಿದ್ದ ತಕ್ಷಣವೇ ನಾವು ಆಂದೋಲನ ನಿಲ್ಲಿಸುವುದಿಲ್ಲ. ಮೂರು ಕೃಷಿ ಕಾಯ್ದೆಗಳನ್ನು ಸಂಸತ್ತಿನಲ್ಲಿ ಹಿಂಪಡೆಯುವವರೆಗೆ ನಾವು ಹೋರಾಟ ತ್ಯಜಿಸುವುದಿಲ್ಲ. ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರ ಕನಿಷ್ಠ ಬೆಂಬಲ ಬೆಲೆಯ ಜೊತೆಗೆ ರೈತರೊಂದಿಗೆ ಮಾತುಕತೆ ನಡೆಸಬೇಕು ಎಂದು ಟಿಕಾಯತ್ ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ಘೋಷಣೆ ಮಾಡಿದರೆ ಸಾಲದು; ಸಂಸತ್ತಿನಲ್ಲಿ ಕೃಷಿ ಕಾನೂನು ರದ್ದಾದ ಬಳಿಕವಷ್ಟೇ ರೈತಹೋರಾಟಕ್ಕೆ ನಿಲ್ಲಲಿದೆ: ರಾಕೇಶ್ ಟಿಕಾಯತ್ ಟ್ವೀಟ್