
ನವದೆಹಲಿ: ಭ್ರಷ್ಟಾಚಾರ ಎಂಬುದು ಗೆದ್ದಲಿನಂತಿದೆ, ದೇಶದ ಅಭಿವೃದ್ದಿಗಾಗಿ ಆದಷ್ಟು ಬೇಗ ಅದನ್ನು ಕಿತ್ತೊಗೆಯಲು ಜನತೆ ಒಂದಾಗಬೇಕೆಂದು ಪ್ರಧಾನಿ ನರೇಂದ್ರ ಮೋದಿ ಒತ್ತಿ ಹೇಳಿದ್ದಾರೆ. ಹೊಸವರ್ಷದಲ್ಲಿ ಆಕಾಶವಾಣಿ ಮೂಲಕ ದೇಶವಾಸಿಗಳನ್ನು ದೇಶದಲ್ಲಿ ಮಾತನಾಡಿದವರು ಮಹಾತ್ಮ ಗಾಂಧಿಯವರ ಪುಣ್ಯತಿಥಿಯಂದು ಪ್ರಧಾನಿ ಅವರಿಗೆ ನಮನ ಸಲ್ಲಿಸಿದರು.
ಹೆಣ್ಣು ಮಕ್ಕಳ ಆಲೋಚನೆಗಳು, ಹಾಗೂ ದೇಶದ ಬಗ್ಗೆ ಅವರ ಕನಸುಗಳು, ಪ್ರತಿಯೊಬ್ಬರ ಪ್ರಯತ್ನ ಒಗ್ಗೂಡಿದಾಗ ಸಾಕಾರಗೊಳ್ಳಲಿದೆ ಎಂದು ಪ್ರಧಾನಿ ಹೇಳಿದ್ದಾರೆ. ಹೊಸವರ್ಷದಲ್ಲಿ ಆಕಾಶವಾಣಿ ಮೂಲಕ ದೇಶವಾಸಿಗಳನ್ನು ದೇಶದಲ್ಲಿ ಮಾತನಾಡಿದವರು ಮಹಾತ್ಮ ಗಾಂಧಿಯವರ ಪುಣ್ಯತಿಥಿಯಂದು ಪ್ರಧಾನಿ ಅವರಿಗೆ ನಮನ ಸಲ್ಲಿಸಿದರು.
ದೇಶದಲ್ಲಿ ಕೋವಿಡ್ ಸೋಂಕು ಕಡಿಮೆಯಾಗುತ್ತಿರುವುದು ಉತ್ತಮ ಮತ್ತು ಆಶಾದಾಯಕ ಬೆಳವಣಿಗೆಯಾಗಿದೆ. ದೇಶದಿಂದ ಕೋವಿಡ್ ಸೋಂಕು ತೊಲಗಿಸಲು ಲಸಿಕೆ ಪರಿಣಾಮಕಾರಿ ಅಸ್ತ್ರ ಈಗಾಗಲೇ ದೇಶದ 60ರಷ್ಟು ಯುವಜನಾಂಗಕ್ಕೆ ಲಸಿಕೆ ನೀಡಲಾಗಿದೆ. ಪದ್ಮ ಪ್ರಶಸ್ತಿ ಪಡೆದವರ ಬಗ್ಗೆ ಹೆಚ್ಚು ಅಧ್ಯಯನ ಮಾಡಿ ಏಕೆಂದರೆ ಸಾಧಾರಣ ಮನುಷ್ಯರನ್ನು ಈ ಪ್ರಶಸ್ತಿಗಳು ಜನ ಹಾಡಿ ಹೊಗಳಿ ವಂತೆ ಹೀರೋಗಳನ್ನಾಗಿ ಮಾಡಿವೆ ಹೀಗಾಗಿ ಪ್ರಶಸ್ತಿ ಪಡೆದವರ ಬಗ್ಗೆ ತಿಳಿದುಕೊಳ್ಳಿ ಎಂದು ಹೇಳಿದರು.
ಭಾರತೀಯ ಸಂಸ್ಕೃತಿ ಪರಂಪರೆ ಕೇವಲ ಭಾರತೀಯರಿಗೆ ಮಾತ್ರವಲ್ಲ, ವಿಶ್ವದ ಜನರಿಗೂ ಇದು ಸದಾ ಪ್ರೇರಣೆಯಾಗಿದೆ ಎಂದರು. ಪ್ರತಿಯೊಬ್ಬರೂ ಜೀವನದಲ್ಲಿ ಕುಟುಂಬದೊಂದಿಗೆ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಬೇಕು ಇದರಿಂದ “ನೀವು ವಿಶೇಷ ರೀತಿಯ ಶಕ್ತಿ ಮತ್ತು ಸ್ಫೂರ್ತಿ ಪಡೆಯುವಿರಿ ಎಂದು ಹೇಳಿದರು .
