Latestಮನರಂಜನೆಸಿನಿಮಾಸೆಲೆಬ್ರಿಟಿ

ನಟ ದಿಲೀಪ್ ಸೇರಿ 6 ಜನರ ಮೊಬೈಲ್ ನೀಡಲು ಹೈಕೋರ್ಟ್ ಆದೇಶ

ನಟಿಯ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ವಿಚಾರಾಣಾಧಿಕಾರಿಗಳಿಗೆ ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿರುವ ಮಲಯಾಳಂನ ಖ್ಯಾತ ನಟ ದಿಲೀಪ್​ಗೆ ಕೇರಳ ಹೈಕೋರ್ಟ್ ಖಡಕ್ ಸೂಚನೆ ನೀಡಿದೆ.

ಪ್ರಕರಣದ ಪ್ರಮುಖ ಸಾಕ್ಷ್ಯ ಒದಗಿಸುವ ದಿಲೀಪ್​ರ ಆರು ಮೊಬೈಲ್ ಫೋನ್​ಗಳನ್ನು ಸೋಮವಾರವೇ ಕೋರ್ಟ್​ಗೆ ಸಲ್ಲಿಸುವಂತೆ ಹೈಕೋರ್ಟ್ ಆದೇಶಿಸಿದೆ. ಆರೋಪಿ ದಿಲೀಪ್ ಮತ್ತಿತರರು ಮೊಬೈಲ್ ಫೋನ್​ಗಳನ್ನು ಪರೀಕ್ಷೆಗೆ ಕಳುಹಿಸಲು ನಿರಾಕರಿಸುವ ಮೂಲಕ ಸಾಕ್ಷ್ಯ ನಾಶಕ್ಕೆ ಪ್ರಯತ್ನಿಸುತ್ತಿದ್ದಾರೆ ಎಂದು ತನಿಖಾ ತಂಡ ಆರೋಪಿಸಿತ್ತು. ಈ ಹಿನ್ನೆಲೆಯಲ್ಲಿ ಆರು ಮೊಬೈಲ್ ಫೋನ್​ಗಳನ್ನು ನೀಡುವಂತೆ ಕೇರಳ ಹೈಕೋರ್ಟ್ ತಾಕೀತು ಮಾಡಿದೆ.

2017ರ ಫೆಬ್ರವರಿ 17ರಂದು ತಮಿಳು, ತೆಲುಗು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ನಟಿಸಿರುವ ನಟಿಯ ಕಾರಿಗೆ ನುಗ್ಗಿದ ಆರೋಪಿಗಳು ಆಕೆಯನ್ನ ಅಪಹರಿಸಿ ಎರಡು ಗಂಟೆಗಳ ಕಾಲ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಕೇಳಿ ಬಂದಿತ್ತು.

ಇದೀಗ ಆರೋಪಿಗಳು ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ಫೆಬ್ರವರಿ 2ಕ್ಕೆ ಮುಂದೂಡಿದೆ. ಜನವರಿ 13ರಂದು ಆಲುವಾದಲ್ಲಿರುವ ನಟ ದಿಲೀಪ್ ಅವರ ಮನೆಯ ಮೇಲೆ ಕೇರಳ ಕ್ರೈಂ ಬ್ರಾಂಚ್ ಅಧಿಕಾರಿಗಳ ತಂಡ ದಾಳಿ ನಡೆಸಿದೆ. 2017ರ ಫೆಬ್ರವರಿಯಲ್ಲಿ ಮಹಿಳಾ ನಟಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ದೃಶ್ಯಾವಳಿಗಳು ದಿಲೀಪ್ ಬಳಿ ಇದೆ ಎಂದು ಆರೋಪಿಸಿ ಬಾಲಚಂದ್ರ ಕುಮಾರ್ ಎಂಬುವವರು ದೂರು ನೀಡಿದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button