Breaking NewsLatestರಾಷ್ಟ್ರೀಯ
ಸಂಕುಚಿತ ಹಿತಾಸಕ್ತಿಗಳಿಂದ ಜನರ ಏಕತೆಗೆ ಧಕ್ಕೆ: ಪಿಣರಾಯಿ ವಿಜಯನ್

ತಿರುವನಂತಪುರ: ಸಂಕುಚಿತ ಹಿತಾಸಕ್ತಿಗಳು ನಮ್ಮ ಏಕತೆಯನ್ನು ದುರ್ಬಲಗೊಳಿಸಲು ಅವಕಾಶ ನೀಡಬಾರದು ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಶ್ರೀ ನಾರಾಯಣಗುರುಗಳ ಸ್ಮರಣೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪಿಣರಾಯಿ ಪೇಸ್ಬುಕ್ನಲ್ಲಿ ತಮ್ಮ ಅಭಿಪ್ರಾಯ ಪ್ರಕಟಿಸಿದ್ದು, ಜನರ ಐಕ್ಯತೆಯು ದೇಶವನ್ನು ವಿಶ್ವದಲ್ಲಿ ಪ್ರಜ್ವಲಿಸುವಂತೆ ಮಾಡುತ್ತದೆ. ನಾರಾಯಣ ಗುರುಗಳ ಕನಸನ್ನು ನನಸಾಗಿಸಲು ನಾವು ಬಹುದೂರ ಸಾಗಬೇಕಿದೆ ಎಂದಿದ್ದಾರೆ.
ಆಧುನಿಕ ಸಮಾಜದ ನಿರ್ಮಾಣದಲ್ಲಿ ಗುರುಗಳ ಪಾತ್ರ ಮಹತ್ವದ್ದಾಗಿದೆ. ಮತೀಯ ಬೇಧ, ಜಾತೀಯತೆಯ ಬೇರೂರುವಿಕೆಯಿಂದ ಮಹನೀಯರು ಕಂಡ ಕನಸು ಸಮಾಜದ ಸಾಕಾರಕ್ಕೆ ಅಡ್ಡಿಯಾಗಿವೆ. ಈಗಲೂ ಅವು ನಮಗೆ ಮುಜುಗರ ಉಂಟುಮಾಡುವಷ್ಟು ಬಲಿಷ್ಠವಾಗಿ ಬೆಳೆದಿವೆ ಎಂದು ವಿಷಾದಿಸಿದ್ದಾರೆ.
