Latestರಾಷ್ಟ್ರೀಯ

ರಾಕೇಶ್ ಟಿಕಾಯಿತ್ ಅವರನ್ನು ʼಡಕಾಯಿತʼ ಎಂದ ಬಿಜೆಪಿ ಸಂಸದ

ನವದೆಹಲಿ: ಭಾರತೀಯ ಕಿಸಾನ್ ಯೂನಿಯನ್ ಮುಖ್ಯಸ್ಥ ರಾಕೇಶ್ ಟಿಕಾಯತ್ ಅವರನ್ನು ʼಡಕಾಯಿತʼ ಎಂದು ಉತ್ತರ ಪ್ರದೇಶದ ಬಿಜೆಪಿ ಸಂಸದ ಅಕ್ಷಯವರ್ ಲಾಲ್ ಗೊಂಡ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ಮಾಡುತ್ತಿರುವವರು ರೈತರಲ್ಲ. ಅವರು ಸಿಖಿಸ್ತಾನ ಮತ್ತು ಪಾಕಿಸ್ತಾನದಿಂದ ಪ್ರೇರಿತರಾದ ರಾಜಕೀಯ ಪಕ್ಷದವರಾಗಿದ್ದಾರೆ. ಪ್ರತಿಭಟನೆಗೆ ವಿದೇಶಗಳಿಂದ ಇವರಿಗೆ ನೆರವು ನೀಡಲಾಗುತ್ತಿದೆ. ಕೆನಡಾ ಮತ್ತಿತರೆ ದೇಶಗಳಿಂದ ಹಣ ಬರುತ್ತಿದೆ. ಉಗ್ರವಾದವನ್ನು ಹುಟ್ಟುಹಾಕಲಾಗುತ್ತಿದೆ. ಈ ಬಗ್ಗೆ ಏಜೆನ್ಸಿಗಳಿಂದ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button