ಜಗತ್ತಿನ ಅತಿದೊಡ್ಡ ಆಸ್ಕರ್ ಪ್ರಶಸ್ತಿ: ಯಾರ ಮುಡಿಗೆ?
ಆಸ್ಕರ್ ಪ್ರಶಸ್ತಿ..ಇದು ಸಿನಿ ಜಗತ್ತಿನ ಅತಿದೊಡ್ಡ ಸಮಾರಂಭ ಎಂದೇ ಪರಿಗಣಿಸಲಾಗುತ್ತದೆ. ಇದೇ ವೇಳೆ, 2021 ರಲ್ಲಿ 94 ನೇ ಅಕಾಡೆಮಿ ಅವಾರ್ಡ್ಸ್ ನಲ್ಲಿ ಅತಿ ಹೆಚ್ಚು ಚರ್ಚೆಯನ್ನು ಮೂಡಿಸಿ ಪ್ರಶಸ್ತಿ ಬಾಚಿದ ಚಲನಚಿತ್ರ ಎಂದರೆ ಅದುವೇ ‘ಡ್ಯೂನ್’ ಚಿತ್ರ. ಈ ಚಿತ್ರ 2022 ರ ಆಸ್ಕರ್ ಅವಾರ್ಡ್ಸ್ ನಲ್ಲಿ ಒಟ್ಟು 4 ವಿಭಾಗಗಳಲ್ಲಿ ಪ್ರಶಸ್ತಿಯನ್ನು ಬಾಚಿಕೊಂಡಿದೆ. ಇದಲ್ಲದೇ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಿದ್ದರಿಂದ CODA ಚಿತ್ರ ಯಾವುದಕ್ಕೂ ಹಿಂದೆ ಬಿದ್ದಿಲ್ಲ. ಚಿತ್ರದ ನಟ ಟ್ರಾಯ್ ಕೋಟ್ಸೂರ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಇದಲ್ಲದೆ, ವಿವಿಧ ವಿಭಾಗಗಳಲ್ಲಿ ವಿಜೇತರ ಹೆಸರನ್ನು ಬಹಿರಂಗಪಡಿಸಲಾಗಿದೆ.
ಅತಿ ದೊಡ್ಡ ಆಸ್ಕರ್ ವಿಜೇತ ಚಿತ್ರ
ಆಸ್ಕರ್ 2022 ರಿಂದ ಇದುವರೆಗೆ ಬಂದಿರುವ ವರದಿಗಳ ಪ್ರಕಾರ, ‘ಡ್ಯೂನ್’ ಅತಿದೊಡ್ಡ ಚಿತ್ರವಾಗಿ ಹೊರಹೊಮ್ಮಿದೆ. ಈ ಚಿತ್ರವು 6 ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಗೆದ್ದಿದೆ, ಅವುಗಳಲ್ಲಿ ನಾಲ್ಕು ಪ್ರಶಸ್ತಿಗಳನ್ನು ಸಮಾರಂಭದ ಆರಂಭದಲ್ಲಿಯೇ ಘೋಷಿಸಲಾಗಿದೆ. ಡ್ಯೂನ್ ಒಟ್ಟು 10 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡರು ಕೂಡ ಅದರ ತೆಕ್ಕೆಗೆ ಅತ್ಯುತ್ತಮ ಮೂಲ ಸಂಗೀತ, ಅತ್ಯುತ್ತಮ ಧ್ವನಿ, ಅತ್ಯುತ್ತಮ ಚಲನಚಿತ್ರ ಸಂಕಲನ, ಅತ್ಯುತ್ತಮ ವಿಶ್ಯುವಲ್ ಎಫೆಕ್ಟ್, ಅತ್ಯುತ್ತಮ ನಿರ್ಮಾಣ ವಿನ್ಯಾಸ ಮತ್ತು ಅತ್ಯುತ್ತಮ ಛಾಯಾಗ್ರಹಣ ಮುಂತಾದ ಪ್ರಶಸ್ತಿಗಳು ಬಿದ್ದಿವೆ. ಅತ್ಯುತ್ತಮ ನಟನಾಗಿ ಕಿಂಗ್ ರಿಚರ್ಡ್ ಚಿತ್ರದ ಪಾತ್ರಕ್ಕಾಗಿ ವಿಲ್ ಸ್ಮಿತ್ ಹಾಗು “ದಿ ಐಸ್ ಆಫ್ ಟ್ಯಾಮಿ ಫೇಯ್” ಸಿನಿಮಾದ ಅಭಿನಯಕ್ಕಾಗಿ ಜೆಸ್ಸಿಕಾ ಚಸ್ಟೈನ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ.
