Breaking NewsLatestಜಿಲ್ಲಾ ಸುದ್ದಿಮೈಸೂರು
ಹುಟ್ಟುಹಬ್ಬದ ದಿನದಂದೇ ಯುವಕ ಸಾವು!

ಮೈಸೂರು: ಹುಟ್ಟುಹಬ್ಬದ ದಿನವೇ ಮರದ ಕೊಂಬೆ ಬಿದ್ದು ಯುವಕ ಮೃತಪಟ್ಟಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೂಗೂರು ಗ್ರಾಮದ ಮನು(28) ಮೃತಪಟ್ಟಿದ್ದಾನೆ.ಇಂದು ಹುಟ್ಟುಹಬ್ಬ ಇದ್ದ ಹಿನ್ನೆಲೆಯಲ್ಲಿ, ಮೈಸೂರಿನಲ್ಲಿರುವ ತನ್ನ ತಮ್ಮನಿಗೆ ಸಿಹಿಯನ್ನು ಕೊಡಲು ಹೋಗಿದ್ದ. ಅಲ್ಲಿಂದ ವಾಪಸ್ ಗ್ರಾಮಕ್ಕೆ ಬೈಕ್ನಲ್ಲಿ ಹೋಗುತ್ತಿರುವಾಗ ಹಳೇ ಕೆಂಪಯ್ಯನಹುಂಡಿ ಗ್ರಾಮದ ರಸ್ತೆಯಲ್ಲಿ ಆಕಸ್ಮಿಕವಾಗಿ ತಲೆಯ ಮೇಲೆ ಮರ ಬಿದ್ದಿದೆ. ಮರ ಬಿದ್ದ ಪರಿಣಾಮ, ಮನು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ತಿ. ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
