Breaking NewsLatestಜಿಲ್ಲಾ ಸುದ್ದಿಮೆಟ್ರೋರಾಜಕೀಯರಾಜ್ಯಸುದ್ದಿ

ಕುಂಕಮಕ್ಕೂ, ವಸ್ತ್ರಸಂಹಿತೆಗೂ ಸಂಬಂಧ ಇಲ್ಲ: ಶಿಕ್ಷಣ ಸಚಿವ ಬಿ.ಸಿ.ನಾಗೇಶ್

ಬೆಂಗಳೂರು: ಡ್ರೆಸ್ ಕೋಡ್ ಇರುವ ಕಡೆ ನಿಯಮ ಪಾಲಿಸಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ. ಬೆಂಗಳೂರಿನ ಮಲ್ಲೇಶ್ವರಂ ಕಾಲೇಜಿನಲ್ಲಿ ಬುಧವಾರ ಕಾಂಗ್ರೆಸ್ ಕಾರ್ಯಕರ್ತರು ಹೋಗಿದ್ದರಂತೆ ಯಾರು ಪ್ರಚೋದಿಸುತ್ತಿದ್ದಾರೆ ಎಂಬುದರ ಬಗ್ಗೆ ತನಿಖೆಯಾಗುತ್ತಿದೆ ಎಂದಿದ್ದಾರೆ.

ಟಿವಿ ಸಂದರ್ಶನದಲ್ಲಿ ಈ ವಿಷಯ ತಿಳಿಸಿರುವ ಅವರು, ಅಲಂಕಾರದ ವಸ್ತುಗಳ ಬಗ್ಗೆ ನಾವು ಯಾವತ್ತೂ ಮಾತನಾಡಿಲ್ಲ. ಓಲೆ, ಜುಮುಕಿ, ಕುಂಕುಮ, ಲಿಪ್ ಸ್ಟಿಕ್ ಗೂ ವಸ್ತ್ರಸಂಹಿತೆಗೂ ಸಂಬಂಧವಿಲ್ಲ. ಶೀಘ್ರ ನೂತನ ಸಮವಸ್ತ್ರ ನೀತಿ ಜಾರಿಗೊಳಿಸುವ ಚಿಂತನೆ ಇದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಶಾಲೆ-ಕಾಲೇಜುಗಳಿಗೆ ಮೂರು ದಿನ ರಜೆ ಘೋಷಣೆ ನಂತರ ಪ್ರೌಢಶಾಲೆಗಳು ಆರಂಭವಾದ ನಂತರ ಹಲವೆಡೆ ಗೋಂದಲ ನಿರ್ಮಾಣವಾಗಿದೆ. ಆದರೆ ಎಲ್ಲರೂ ಹೈಕೋರ್ಟ್ ಆದೇಶವನ್ನು ಪಾಲಿಸಲೇಬೇಕಿದೆ. ಬುಧವಾರ 112 ಮಕ್ಕಳು ಶಾಲೆ ಮತ್ತು ಕಾಲೇಜುಗಳಿಂದ ವಾಪಸ್ಸು ಹೋಗಿರುವುದು ಸರ್ಕಾರದ ಗಮನದಲ್ಲಿದೆ ಎಂದರು.  

ಗುರುವಾರ ಹಿಜಾಬ್ ಧರಿಸಿ ವಿದ್ಯಾರ್ಥಿನಿಯರಿಗೆ ಕಾಲೇಜು ಪ್ರವೇಶಕ್ಕೆ ನಿರ್ಬಂಧ ವಿಧಿಸಿದ್ದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿನಿಯರು ಕುಂಕುಮ ಧರಿಸಿ ಬಂದವರಿಗೆ ಏಕೆ ಅವಕಾಶ ನೀಡಲಾಗಿದೆ ಎಂದು ಪ್ರಶ್ನಿಸಿದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button