Breaking NewsLatestಜಿಲ್ಲಾ ಸುದ್ದಿಮೆಟ್ರೋರಾಜಕೀಯರಾಜ್ಯರಾಷ್ಟ್ರೀಯಸುದ್ದಿ

ಹಿಜಾಬ್ ಪ್ರಕರಣ: ವಿಸ್ತೃತ ಪೀಠದ ಆದೇಶ ಪ್ರಕಟ, ಇಲ್ಲಿದೆ ಪೂರ್ಣ ವಿವರ..

Hijab Case: ಬೆಂಗಳೂರು: ಕರ್ನಾಟಕ ಹೈಕೋರ್ಟ್ ನ ತ್ರಿ ಸದಸ್ಯ ಪೀಠ ಎಲ್ಲಾ ವಿದ್ಯಾರ್ಥಿಗಳು ಅವರ ಧರ್ಮ ಮತ್ತು ನಂಬಿಕೆಯನ್ನು ಲೆಕ್ಕಿಸದೇ ತರಗತಿಯೊಳಗೆ ಸ್ಕಾರ್ಫ್, ಹಿಜಾಬ್, ಕೇಸರಿ ಶಾಲು ಅಥವಾ ಧಾರ್ಮಿಕ ಚಿಹ್ನೆಯ ವಸ್ತ್ರ ತರದಂತೆ ಮಧ್ಯಂತರ ಆದೇಶ ನೀಡಿದೆ. ಮುಖ್ಯನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ತ್ರಿಸದಸ್ಯ ಪೀಠದ ಮಧ್ಯಂತರ ಆದೇಶವು, ಕಾಲೇಜು ಅಭಿವೃದ್ಧಿ ಸಮಿತಿಗಳು, ವಿದ್ಯಾರ್ಥಿಗಳ ಡ್ರೆಸ್ ಕೋಟ್ ಅಥವಾ ಸಮವಸ್ತ್ರವನ್ನು ಸೂಚಿಸಿರುವ ಸಂಸ್ಥೆಗಳಿಗೆ ಸೀಮಿತವಾಗಿದೆ ಎಂದು ಗಮನಿಸಿದೆ.

ಪೀಠವೂ ರಾಜ್ಯ ಸರ್ಕಾರ ಮತ್ತು ಸಂಬಂಧಿಸಿದವರಿಗೆ ಶಿಕ್ಷಣ ಸಂಸ್ಥೆಗಳನ್ನು ಮತ್ತೆ ತೆರೆಯಲು ಹಾಗೂ ವಿದ್ಯಾರ್ಥಿಗಳು ಶೀಘ್ರ ತರಗತಿಗೆ ಮರಳಲು ಅವಕಾಶ ನೀಡುವಂತೆ ವಿನಂತಿಸಿದೆ

ನಮ್ಮದು ಸುಸಂಸ್ಕೃತ ಸಮಾಜವಾಗಿರುವುದರಿಂದ ಧರ್ಮ, ಸಂಸ್ಕೃತಿ ಅಥವಾ ಅಂತಹುದ್ದೇ ಹೆಸರಿನಲ್ಲಿ ಯಾವುದೇ ವ್ಯಕ್ತಿ ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಗೆ ಭಂಗ ತರುವ ಯಾವುದೇ ಕೃತ್ಯ ಮಾಡಲು ಅನುಮತಿ ನೀಡಲಾಗುವುದಿಲ್ಲ ಎಂದು ಪೀಠ ಹೇಳಿದೆ.

ಅಂತ್ಯವಿಲ್ಲದ ಆಂದೋಲನಗಳು, ಶಿಕ್ಷಣ ಸಂಸ್ಥೆಗಳನ್ನು ಅನಿರ್ದಿಷ್ಟವಾಗಿ ಮುಚ್ಚುವುದು ಸಂತೋಷದ ಸಂಗತಿಯಲ್ಲ. ವಿದ್ಯಾರ್ಥಿಗಳ ಹಿತಾಸಕ್ತಿಯ ಆಂದೋಲನಗಳ ಮುಂದುವರಿಕೆ ಮತ್ತು ಅದರ ಪರಿಣಾಮವಾಗಿ ಸಂಸ್ಥೆಗಳನ್ನು ಮುಚ್ಚುವುದಕ್ಕಿಂತ ತರಗತಿಗಳಿಗೆ ಹಿಂದಿರುಗುವುದು ಉತ್ತಮ ಎಂದು ಆದೇಶದಲ್ಲಿ ಪೀಠ ಹೇಳಿದೆ.

ಸಂಬಂಧಿಸಿದ ಎಲ್ಲರೂ ಮತ್ತು ಸಾರ್ವಜನಿಕರು ಶಾಂತಿ ಮತ್ತು ನೆಮ್ಮದಿಯನ್ನು ಕಾಪಾಡುತ್ತಾರೆ ಎಂದು ನಾವು ಭಾವಿಸುತ್ತೇವೆ ಮತ್ತು ನಂಬುತ್ತೇವೆ ಎಂದು ಹೈಕೋರ್ಟ್ ತನ್ನ ಮಧ್ಯಂತರ ಆದೇಶದಲ್ಲಿ ತಿಳಿಸಿದೆ.

ಹೈಕೋರ್ಟ್ ನ ಮಧ್ಯಂತರ ಆದೇಶ ಅಂತಿಮವಲ್ಲ. ಸೋಮವಾರದ ನಂತರ ಹಂತಹಂತವಾಗಿ ವಿಚಾರಣೆ ನಡೆಸಲಿದ್ದು ಅಲ್ಲಿಯವರೆಗೆ ಯಾವುದೇ ಧಾರ್ಮಿಕ ಗುರುತು ಹೊಂದಿರುವ ಬಟ್ಟೆಗಳನ್ನು ಧರಿಸದೆ ವಿದ್ಯಾರ್ಥಿಗಳು ಶಾಲೆ-ಕಾಲೇಜುಗಳು ಬರಬೇಕು ಎಂದು ಹೇಳಲಾಗಿದೆ.

ರಾಜ್ಯಾದ್ಯಂತ ಕಾಲೇಜು ವಿದ್ಯಾರ್ಥಿಗಳು ರಾಜ್ಯವ್ಯಾಪಿಯಾಗಿ ನಡೆಸಿದ ಪ್ರತಿಭಟನೆ ನಂತರ ರಾಜ್ಯ ಸರ್ಕಾರ ಮೂರು ದಿನ ಪ್ರೌಢ ಶಾಲೆ ಮತ್ತು ಕಾಲೇಜುಗಳನ್ನು ಬಂದ್ ಮಾಡುವ ಆದೇಶ ಹೊರಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Spread the love

Related Articles

Leave a Reply

Your email address will not be published. Required fields are marked *

Back to top button