Latestಜಿಲ್ಲಾ ಸುದ್ದಿಮಂಡ್ಯ
ಮಂಡ್ಯದ ಮುಸ್ಕಾನ್ ಗೆ ಉಡುಗೊರೆಯ ಸುರಿಮಳೆ

ಮಂಡ್ಯ: ಇತ್ತೀಚೆಗೆ ಹಿಜಾಬ್ ವಿವಾದಲ್ಲಿ ಏಕಾಂಗಿಯಾಗಿ ಅಲ್ಲಾ ಹೂ ಅಕ್ಬರ್ ಘೋಷಣೆ ಕೂಗಿ ಸಿಕ್ಕಾಪಟ್ಟೆ ಸುದ್ದಿಯಾಗಿದ್ದ ವಿದ್ಯಾರ್ಥಿನಿ ಮುಸ್ಕಾನ್ ಗೆ ಮುಸ್ಲಿಂ ನಾಯಕರಿಂದ ಉಡುಗೊರೆಯ ಸುರಿಮಳೆಯೇ ಹರಿದು ಬಂದಿದೆ.
ಮಂಡ್ಯದ ಗುತ್ತಲು ಬಡಾವಣೆಯಲ್ಲಿರುವ ವಿದ್ಯಾರ್ಥಿನಿಯ ನಿವಾಸಕ್ಕೆ ಮುಖಂಡರು ಭೇಟಿ ನೀಡಿದ್ದರು. ಈ ವೇಳೆ ಮುಸ್ಕಾನ್ ಗೆ ಮೆಚ್ಚಿ 5 ಲಕ್ಷ ರೂಪಾಯಿ ಬಹುಮಾನ ನೀಡಲಾಗಿತ್ತು. ಅದರ ಬೆನ್ನಲ್ಲೇ ಇದೀಗ ಮಹಾರಾಷ್ಟ್ರದ ಬಾಂದ್ರಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಜೀಶಾನ್ ಅಸಿದ್ದಿಕಿ, ಐ ಫೋನ್ ಹಾಗೂ ಸ್ಮಾರ್ಟ್ ವಾಚ್ ಉಡುಗೊರೆಯಾಗಿ ನೀಡಿದ್ದಾರೆ. ಇನ್ನು ಕಾರ್ಪೋರೇಟರ್ ಇಮ್ರಾನ್ ಪಾಷಾ ಕೂಡ 1 ಲಕ್ಷ ರೂಪಾಯಿ ನೀಡಿದ್ದಾರೆ.
ನಂತರ ಮಾತನಾಡಿದ ಶಾಸಕ ಸಿದ್ದಿಕಿ ಮಾತನಾಡಿ, ಮುಸ್ಕಾನ್ ಘೋಷಣೆ ಕೂಗಿರುವುದು ನನಗೆ ಹೆಮ್ಮೆ. ಅಷ್ಟು ಜನರ ಮುಂದೆ ಧೈರ್ಯದಿಂದ ಕೂಗಿದ್ದಾರೆ. ಅದರ ಬಗ್ಗೆ ಇಂದು ಇಡೀ ದೇಶವೇ ಮಾತನಾಡುತ್ತಿದ್ದಾರೆ ಎಂದರು.



