Latestಮನರಂಜನೆಸಿನಿಮಾ

ಸಿಂಪಲ್ ಸ್ಟಾರ್ ರಕ್ಷಿತ್ ಗೆ ಒಲಿದು ಬಂದ ಕಂಕಣ ಭಾಗ್ಯ? ಆ ಹುಡುಗಿ ಯಾರು ಗೊತ್ತಾ?

ಚಂದನವನದ ನಟ ರಕ್ಷಿತ್ ಶೆಟ್ಟಿ ಉಳಿದವರು ಕಂಡಂತೆ ಸಿನಿಮಾ ಮೂಲಕ ಹೆಚ್ಚು ಜನಪ್ರಿಯರಾಗಿದ್ದರು. ಅವರು ಕೇವಲ ನಟನಲ್ಲದೇ, ನಿರ್ದೇಶಕನಾಗಿಯೂ ಹೊರಹೊಮ್ಮಿದ್ದರು. ಇತ್ತೀಚೆಗೆ ಅವನೇ ಶ್ರೀಮನ್ನಾರಾಯಣ ಚಿತ್ರದಲ್ಲಿ ನಟಿಸಿ ಪ್ರೇಕ್ಷರಿಂದ ಮೆಚ್ಚುಗೆ ಪಡೆದಿದ್ದರು. ಇದೀಗ ಅವರ ಬತ್ತಳಿಕೆಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಸದ್ಯ 777 ಚಾರ್ಲಿ ಸಿನಿಮಾ ರಿಲೀಸ್ ಗೆ ಸಜ್ಜಾಗಿದೆ.ಸಪ್ತ ಸಾಗರದಾಚೆ ಸಿನಿಮಾದ ಶೂಟಿಂಗ್ ನಡೆಯುತ್ತಿದೆ.

ಇನ್ನು ರಕ್ಷಿತ್ ಶೆಟ್ಟಿ ವೈಯಕ್ತಿಕ ವಿಚಾರ ಕುರಿತು ಸುದ್ದಿಯಲ್ಲಿದ್ದಾರೆ. ಹೌದು ರಕ್ಷಿತ್​ ಶೆಟ್ಟಿ ಮದುವೆ ವಿಚಾರ. ಸಿಂಪಲ್​ಸ್ಟಾರ್ ರಕ್ಷಿತ್​ ಶೆಟ್ಟಿಗೆ ಕಂಕಣ ಭಾಗ್ಯ ಕೂಡಿಬಂದಿದೆಯಂತೆ. ಹಾಗಂತ ಗಾಂಧಿನಗರದಲ್ಲಿ ಗುಸುಪಿಸು ಕೇಳಿಬರುತ್ತಿದೆ.ಅದ್ಯಾರಪ್ಪ ರಕ್ಷಿತ್​ ಶೆಟ್ಟಿ ಕೈಹಿಡಿಯುವ ಹುಡುಗಿ ಎಂದು ಅಭಿಮಾನಿಗಳಿಗೆ ಕುತೂಹಲ ಮೂಡಿದೆ. ಆದರೆ ಈ ಬಗ್ಗೆ ರಕ್ಷಿತ್ ಶೆಟ್ಟಿ ವಿಚಾರವನ್ನ ಎಲ್ಲೂ ಹೇಳಿಲ್ಲ.

ಅಂದಹಾಗೆ ರಕ್ಷಿತ್ ಆಗಾಗ ಜ್ಯೋತಿಷ್ಯ ಹತ್ರ ಹೋಗುತ್ತಾರೆ. ಇದೀಗ ಅವರ ಜ್ಯೋತಿಷಿ ರಕ್ಷಿತ್​ ಮದುವೆ ಬಗ್ಗೆ ಭವಿಷ್ಯ ನುಡಿದಿದ್ದಾರಂತೆ. ರಿಷಬ್​ ಶೆಟ್ಟಿ ಅವರ ತಂದೆ ಭಾಸ್ಕರ್​ ಶೆಟ್ಟಿ. ಇವರು ಜ್ಯೋತಿಷಿ ಪಂಡಿತರು.ಅವರಿಗೆ ಏಪ್ರಿಲ್​ 23ರಿಂದ ಗುರುಬಲ ಬರಲಿದೆಯಂತೆ, ಹೀಗಾಗಿ ಮುಂದಿನ ಒಂದು ವರ್ಷದಲ್ಲಿ ರಕ್ಷಿತ್ ಮದುವೆಯಾಗುತ್ತೆ ಅಂತ ಭಾಸ್ಕರ್​ ಶೆಟ್ಟಿ ಹೇಳಿದ್ದಾರಂತೆ. ಈ ಬಗ್ಗೆ ರಿಷಬ್​ ಶೆಟ್ಟಿ ಶೋವೊಂದರಲ್ಲಿ ಹೇಳಿದ್ದರು.ಹೀಗಾಗಿ ಅಭಿಮಾನಿಗಳಿಗೆ ಕುತೂಹಲ ಹೆಚ್ಚಿಸಿದೆ.

Spread the love

Related Articles

Leave a Reply

Your email address will not be published. Required fields are marked *

Back to top button