Breaking Newsಕಲಬುರ್ಗಿಜಿಲ್ಲಾ ಸುದ್ದಿಶಿವಮೊಗ್ಗ

ಸಿಗಂದೂರು ಚೌಡೇಶ್ವರಿ ದೇವಸ್ಥಾನ ಸರ್ಕಾರ ಅಧೀನಕ್ಕೆ ಬೇಡ: ಸಿಎಂಗೆ ಪತ್ರ ಬರೆದ ಮಾಲೀಕಯ್ಯ ಗುತ್ತೆದಾರ

ಕಲಬುರಗಿ: ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಸಿಗಂದೂರು ಚೌಡೇಶ್ವರಿ ಅಮ್ಮನ ದೇವಸ್ಥಾನವನ್ನು ಸರಕಾರ ತನ್ನ ಅಧೀನಕ್ಕೆ ತೆಗೆದುಕೊಳ್ಳಬಾರದೆಂದು ಈಡಿಗ ಸಮಾಜದ ಮುಖಂಡ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೆದಾರ ಸಿಎಂ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ‌.

300 ವರ್ಷಗಳ ಇತಿಹಾಸ ಹೊಂದಿರುವ ಸಿಗಂದೂರು ಚೌಡೇಶ್ವರಿ ದೇವಿ ಈಡಿಗರ ಸಮಾಜದ ಆರಾಧ್ಯ ಕುಲದೇವತೆಯಾಗಿದ್ದಾಳೆ. ದೇವಸ್ಥಾನದ ಸರ್ವಾಂಗೀಣ ಅಭಿವೃದ್ದಿಯನ್ನು ಸರ್ಕಾರದ ಸಹಾಯವಿಲ್ಲದೆ ನಮ್ಮ ಈಡಿಗ ಸಮಾಜದ ಮುಖಂಡರೇ ಮಾಡಿದ್ದಾರೆ. ಸದ್ಯ ದೇವಸ್ಥಾನದ ಅಡಿಯಲ್ಲಿ ಸಾವಿರಾರು ಜನರು ತಮ್ಮ ಬದುಕು ಕಟ್ಟಿಕೊಂಡಿದ್ದಾರೆ.

ಯಾವುದೇ ಕಾರಣಕ್ಕೂ ಸರ್ಕಾರ ದೇವಸ್ಥಾನವನ್ನು ತನ್ನ ಅಸ್ತಿತ್ವಕ್ಕೆ ತೆಗೆದುಕೊಳ್ಳಬಾರದೆಂದು ಎಂದು ಮನವಿ ಮಾಡಿದ ಗುತ್ತೆದಾರ, ಒಂದೊಮ್ಮೆ ಸರಕಾರ ದೇವಸ್ಥಾನ ತನ್ನ ಅಧೀನಕ್ಕೆ ಪಡೆಯಲು ಪ್ರಯತ್ನ ಮಾಡಿದ್ರೆ ಕರ್ನಾಟಕದಾದ್ಯಂತ ಈಡಿಗ ಸಮಾಜದ ಬೀದಿಗೆ ಇಳಿದು ಉಗ್ರ ಹೋರಾಟ ಮಾಡಲಿದೆ ಎಂದು ಎಚ್ಚರಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button