ಚಿಕ್ಕಮಗಳೂರು
ಅಪಘಾತ: ಇಬ್ಬರು ರೈತಮುಖಂಡರು ಸಾವು

ಚಿಕ್ಕಮಗಳೂರು: ಭಾರಿ ಮಳೆ ಸುರಿಯುತ್ತಿದ್ದ ಹಿನ್ನೆಲೆಯಲ್ಲಿ ಚಲಿಸುತ್ತಿದ್ದ ಕಾರು ಮರಕ್ಕೆ ಡಿಕ್ಕಿಯಾಗಿ ಇಬ್ಬರು ರೈತಮುಖಂಡರು ಮೃತರಾಗಿರುವ ದಾರುಣ ಘಟನೆ ಚಿಕ್ಕಮಗಳೂರು ನಗರದ ರಾಮನಹಳ್ಳಿ ಬಳಿ ನಡೆದಿದೆ.
ನಿವೃತ್ತ ಸೈನಿಕ ಹಾಗೂ ರೈತಸಂಘದಲ್ಲಿ ಗುರುತಿಸಿಕೊಂಡಿದ್ದ ಹಾಸನ ಜಿಲ್ಲೆ ಅಲೂರಿನ ರಾಮನಗರದ ರಾಮಸ್ವಾಮಿ (70) ಹಾಗೂ ಚನ್ನಪಟ್ಟಣದ ಎಚ್.ಮೊಗೇನಹಳ್ಳಿ ಗ್ರಾಮದ ಎಂ ರಾಮು (55) ಮೃತ ದುರ್ದೈವಿಗಳು. ನವಲಗುಂದದಿಂದ ಬೇಲೂರಿಗೆ ಹೋಗುತ್ತಿದ್ದ ವೇಳೆ ಅಪಘಾತ ನಡೆದಿದೆ. ಎಂ.ರಾಮು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷರಾಗಿದ್ದು ಹಾಸನ ಜಿಲ್ಲೆಯ ಬೇಲೂರಿನವರು.
ಕಾರಿನಲ್ಲಿದ್ದ ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ. ಚಿಕ್ಕಮಗಳೂರು ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




