Breaking NewsLatestಜಿಲ್ಲಾ ಸುದ್ದಿಬೆಳಗಾವಿರಾಜಕೀಯ

ಬಿಜೆಪಿ – ಕಾಂಗ್ರೆಸ್ ಗೆ ಅಸ್ತಿತ್ವದ ಪ್ರಶ್ನೆ : ಫುಲ್ ಆ್ಯಕ್ಟಿವ್ ಆಗಿರೋ ಉಸ್ತುವಾರಿಗಳು

ಬೆಳಗಾವಿ : ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬರೋಬ್ಬರಿ 25 ವರ್ಷಗಳ ನಂತರ ಇದೆ ಮೊದಲ ಬಾರಿಗೆ ಈಗ ಚಿಹ್ನೆಗಳ ಆಧಾರದ ಮೇಲೆ ಚುನಾವಣೆ ನಡೆಯುತ್ತಿದೆ, ರಾಷ್ಟ್ರೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನ ಬಹುತೇಕ ಕಡೆ ನಿಲ್ಲಿಸಿದ್ದು ತಮ್ಮ ಸಾಮರ್ಥ್ಯವನ್ನು ಸಾಬಿತುಪಡಿಸಲು ಸಿದ್ಧವಾಗಿವೆ.

ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ ಉಸ್ತುವಾರಿಗಳಿಗೆ ಆತಂಕ

ಟಿಕೆಟ್ ಹಂಚಿಕೆ ವಿಚಾರದಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಅಸಮಾಧಾನ ಆಗಿದ್ದು ಇದೇ ವಿಚಾರಕ್ಕೆ ಹಲವು ನಾಯಕರು ಮುನಿಸಿಕೊಂಡು ಪಕ್ಷೇತರ ಅಭ್ಯರ್ಥಿಯಾಗಿ 20 ಹೆಚ್ಚು ಜನ ನಾಮಪತ್ರ ಸಲ್ಲಿಸಿದ್ದಾರೆ ಸದ್ಯ ಇದೆ ವಿಚಾರವಾಗಿ ಉಸ್ತುವಾರಿಗಳಾದ ಶಾಸಕ ಅಭಯ್ ಪಾಟೀಲ್, ಅನಿಲ್ ಬೆನಕೆ ನಿದ್ದೆಗೇಡಿಸಿದೆ, ಎಂಇಎಸ್ ಕಾರ್ಯಕರ್ತರಿಗೆ ಅಷ್ಟಾಗಿ ಟಿಕೆಟ್ ನೀಡಿಲ್ಲ ಎಂದು ಎಂಇಎಸ್ ಕೂಡ ಪ್ರತ್ಯೇಕವಾಗಿ ಸ್ಪರ್ದಿಸಿದ್ದು ಬಿಜೆಪಿ ಸಂಪ್ರದಾಯ ಮತಗಳು ವಿಭಜನೆ ಆಗುವ ಆತಂಕ ಕೂಡ ಕಾಡುತ್ತಿದೆ. ಇದೆಲ್ಲವನ್ನು ಗಮನ ಇಟ್ಟುಕೊಂಡಿರುವ ನಾಯಕರು ಬೆಳಗಾವಿ ಜಿಲ್ಲೆಯಲ್ಲಿ ಮತ್ತೆ ಪಾರುಪತ್ಯ ಮೇರುವಂತೆ ಮಾಡುವುದು ಕೂಡ ಸವಾಲಿನ ಕೆಲಸವಾಗಿದೆ.

AAP, AIMIM, SDPI ಪಕ್ಷಗಳು ಕಾಂಗ್ರೆಸ್ ಗೆ ಕಂಟಕ:

ಕಾಂಗ್ರೆಸ್ ಪಕ್ಷದ ಮತ ಬ್ಯಾಂಕಗಳ ಅಭ್ಯರ್ಥಿಗಳಿಗೆ ಈ ಮೂರು ಪಕ್ಷಗಳು ಟಿಕೆಟ್ ಹಂಚಿಕೆ ಮಾಡಿದ್ದು ಕಾಂಗ್ರೆಸ್ ಪಕ್ಷಕ್ಕೆ ತಲೆ ನೋವಾಗಿ ಪರಿಣಮಿಸಿದೆ, ಉಪ ಚುನಾವಣೆ ನಂತರ ಅತಿ ಕಡಿಮೆ ಅಂತರದಲ್ಲಿ ಸೋತರು ಕೂಡ ಧೈರ್ಯವಾಗಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೋಳಿಗೆ ಮೂರು ಪಕ್ಷಗಳ ಸ್ಪರ್ಧೆ ಸಾಂಪ್ರದಾಯಿಕ ಮತಗಳ ವಿಭಜನೆ ಆಗುವ ಆತಂಕ ಕಾಡುತ್ತಿದೆ. ಉಸ್ತುವಾರಿಗಳಾದ ಎಂ.ಬಿ.ಪಾಟೀಲ್ ಹಾಗೂ ಮುಖಂಡರು ಕಾಲ ಹರಣ ಮಾಡಿ ಟಿಕೆಟ್ ಹಂಚಿಕೆ ಮಾಡಿದ್ದು ಕೂಡ ಹೊಡೆತು ಕೊಡುವ ಸಾಧ್ಯತೆ ಇದೆ. ಸದ್ಯ ಪಕ್ಷದ ಚಿಹ್ನೆ ಅಡಿಯಲ್ಲಿ ಸ್ಪರ್ದಿಸಿರುವ ಹುರಿಯಾಳುಗಳನ್ನು ಗೆಲ್ಲಿಸಿಕೊಂಡು ಬರಲೇ ಬೇಕು ಎನ್ನುವ ಜಿದ್ದಿಗೆ ಬಿದ್ದಿದ್ದಾರೆ. ಏನಾಗಲಿದೆ ಎನ್ನುವದನ್ನ ಕಾದು ನೋಡಬೇಕಿದೆ.

ಇನ್ನು ಜೆಡಿಎಸ್ 10 ಅಭ್ಯರ್ಥಿಗಳನ್ನ ಮಾತ್ರ ಅಧಿಕೃತವಾಗಿ ಘೋಷಿಸಿದ್ದು ಮುಂದೆ ಕೂಡ ಬಿ ಪಾರ್ಮ್ ನೀಡುವ ಸಾಧ್ಯತೆ ದಟ್ಟವಾಗಿದೆ, ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲಾ ಎನ್ನುವಂತೆ ಇದ್ದು ಜೆಡಿಎಸ್ ಚುನಾವಣೆಗೂ ಮುಂಚೆಯೇ ಸೋಲು ಒಪ್ಪಿಕೊಂಡಂತೆ ಕಾಣುತ್ತಿದೆ.

ಇಂದು ನಾಮಪತ್ರ ಹಿಂದೆ ತೆಗೆದುಕೊಳ್ಳಲು ಅಂತಿಮ ದಿನವಾಗಿದ್ದು ಬಂಡಾಯ ಪಕ್ಷೇತರ ಅಭ್ಯರ್ಥಿಗಳು ಎಷ್ಟು ಜನ ಹಿಂದೆ ಸರಿಯಲಿದ್ದಾರೆ ಎಂದು ಕಾದು ನೋಡಬೇಕಿದೆ.

Spread the love

Related Articles

Leave a Reply

Your email address will not be published. Required fields are marked *

Back to top button