Breaking NewsLatestರಾಜಕೀಯರಾಜ್ಯ

ಶೀಘ್ರವೇ ಶುಭಸುದ್ದಿ ಎಂದ ಬೊಮ್ಮಾಯಿ

ಬೆಂಗಳೂರು: ಶೀಘ್ರವೇ ಶುಭಸುದ್ದಿ ಬರಲಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

ಬೆಳಗ್ಗೆ ವಿಧಾನಸೌಧಕ್ಕೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರೊಂದಿಗೆ ಆಗಮಿಸಿದ ಸಿಎಂ, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ಇಂದೇ ಹೊಸ ಮಂತ್ರಿಮಂಡಲ ರಚನೆಯಾಗಲಿದ್ದು, ಮಧ್ಯಾಹ್ನ 2.15ಕ್ಕೆ ಹೊಸ ಸಚಿವರು ಪ್ರಮಾಣವಚನ ಸ್ವೀಕರಿಸುವರು ಎಂದು ತಿಳಿಸಿದರು.

ಒಂದೆರಡು ವಿಚಾರಗಳಲ್ಲಷ್ಟೇ ಸ್ಪಷ್ಟತೆ ಸಿಗಬೇಕಿದ್ದು, ಶೀಘ್ರವೇ ಹೊಸ ಸಚಿವರ ಪಟ್ಟಿ ಕೈಸೇರಲಿದೆ ಎಂದ ಅವರು ಯಾವುದೇ ಗೊಂದಲ ಇಲ್ಲ ಎಂದೂ ಹೇಳಿದರು.

ರಾಜ್ಯಪಾಲರ ಸಹಿ ನಂತರ ಹೊಸ ಸಚಿವರ ಪಟ್ಟಿ ರಾಜಭವನದಿಂದ ಬಿಡುಗಡೆಯಾಗಲಿದೆ ಎಂದು ಅವರು ಹೇಳಿದ್ದಾರೆ.

ಎಷ್ಟು ಸಿಎಂ ಹುದ್ದೆ ಮತ್ತು ಯಾರು ಡಿಸಿಎಂ ಆಗಲಿದ್ದಾರೆ ಎಂಬುದರ ಬಗ್ಗೆಯೂ ಪಟ್ಟಿಯಲ್ಲಿ ಸ್ಪಷ್ಟತೆ ಸಿಗಲಿದೆ ಎಂದು ಬೊಮ್ಮಾಯಿ ಹೇಳಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button