Breaking NewsLatestರಾಜಕೀಯರಾಜ್ಯ

ಸಂಪುಟ ವಿಸ್ತರಣೆ; ಹಲವು ಶಾಸಕರಿಗೆ ಹೋಗಿದೆ ಸಿಎಂ ಕಚೇರಿಯಿಂದ ಕರೆ

ಬೆಂಗಳೂರು: ನವದೆಹಲಿಯಿಂದ ವಾಪಸಾಗಿರುವ ಸಿಎಂ ಬಿಮ್ಮಾಯಿ ಸಂಪುಟ ಗಾತ್ರ ಕುರಿತು ಸುಳಿವು ಬಿಟ್ಟುಕೊಟ್ಟಿಲ್ಲ. ಎರಡು ಹಂತದಲ್ಲಿ ಸಂಪುಟ ರಚನೆಯಾಗಬಹುದು ಎಂದಿದ್ದಾರೆ.

ಈ ನಡುವೆ ಈ ಬಾರಿ ಉಪಮುಖ್ಯಮಂತ್ರಿ ಹುದ್ದೆ ಇರುವುದಿಲ್ಲ. ಪಕ್ಷ ವರಿಷ್ಠರು ಅದಕ್ಕೆ ಒಪ್ಪಿಗೆ ನೀಡಿಲ್ಲ ಎಂದು ಗೊತ್ತಾಗಿದೆ.ಆದರೆ, ಇನ್ನೆರಡು ವಿಚಾರಗಳ ಬಗ್ಗೆ ಚರ್ಚೆ ಬಾಕಿ ಇದ್ದು, ಅದು ಸ್ಪಷ್ಟವಾಗುತ್ತಿದ್ದಂತೆ ಹೊಸ ಪಟ್ಟಿ ಕೈಸೇರಲಿದೆ ಎಂದು ಬೊಮ್ಮಾಯಿ ಹೇಳಿದ್ದಾರೆ.

ಈ ಮಧ್ಯೆ, ನೂತನ ಮಂತ್ರಿಮಂಡಲ ಸೇರುವಂತೆ ಹಿರಿಯ ಮುಖಂಡರು ಹಾಗೂ ಮಾಜಿ ಸಚಿವರಾದ ಗೋವಿಂದ ಕಾರಜೋಳ, ಕೆ.ಎಸ್.ಈಶ್ವರಪ್ಪ, ಶ್ರೀರಾಮುಲು, ಮುರುಗೇಶ್ ನಿರಾಣಿ, ಉಮೇಶ್ ಕತ್ತಿ, ಡಾ.ಕೆ.ಸುಧಾಕರ್, ಎಸ್.ಟಿ.ಸೋಮಶೇಖರ್, ಬಿ.ಸಿ.ಪಾಟೀಲ್, ಎಂ.ಟಿ.ಬಿ ನಾಗರಾಜ್, ಶಂಕರ ಪಾಟೀಲ್ ಮುನೇನಕೊಪ್ಪ, ಪೂರ್ಣಿಮಾ ಶ್ರೀನಿವಾಸ್, ಎಸ್.ಅಂಗಾರ, ಅರವಿಂದ ಲಿಂಬಾವಳಿ, ಅರಗ ಜ್ಞಾನೇಂದ್ರ, ಹಾಲಪ್ಪ ಆಚಾರ್, ಆನಂದ್ ಸಿಂಗ್, ವಿ.ಸೋಮಣ್ಣ ಬೈರತಿ ಬಸವರಾಜ್, ಮುನಿರತ್ನ, ವಿ.ಸುನೀಲ್ ಕುಮಾರ್, ಮಾಧುಸ್ವಾಮಿ ಮತ್ತಿತರರಿಗೆ ಈಗಾಗಲೇ ಫೋನ್ ಕರೆ ಹೋಗಿದೆ ಎಂದು ತಿಳಿದುಬಂದಿದೆ.

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಅವರಿಗೆ ಮಂತ್ರಿಸ್ಥಾನ ಅನುಮಾನ ಎಂದು ತಿಳಿದಿದೆ.

Spread the love

Related Articles

Leave a Reply

Your email address will not be published. Required fields are marked *

Back to top button