Breaking NewsLatestರಾಜ್ಯಹುಬ್ಬಳ್ಳಿ - ಧಾರವಾಡ
ತಂದೆ ತಾಯಿ ಸಮಾಧಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಬೊಮ್ಮಾಯಿ

ಹುಬ್ಬಳ್ಳಿ: ನೂತನ ಸಿಎಂ ಆಗಿ ಮೊದಲ ಬಾರಿಗೆ ತವರು ಜಿಲ್ಲೆಗೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ತಂದೆ ತಾಯಿ ಸಮಾಧಿಗೆ ಭೇಟಿ ನೀಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಆರ್ಶೀವಾದ ಪಡೆದುಕೊಂಡರು.
ಹುಬ್ಬಳ್ಳಿ ನಗರದ ಕೇಶಕುಂಜ ಆರ್ ಎಸ್ ಎಸ್ ಕಚೇರಿ ಭೇಟಿ ಬಳಿಕ, ನೇರವಾಗಿ ಹುಬ್ಬಳ್ಳಿ ಧಾರವಾಡ ಅವಳಿನಗರ ಮಧ್ಯ ಭಾಗದ ರಾಯಪುರ ಬಳಿಯ ಆರ್ ಟಿ ಓ ಕಚೇರಿ ಮುಂಭಾಗದಲ್ಲಿರುವ ತಂದೆ ತಾಯಿ ಸಮಾಧಿ ಸ್ಥಳಕ್ಕೆ ತೆರಳಿದರು. ತಂದೆ ದಿವಂಗತ ಮಾಜಿ ಮುಖ್ಯಮಂತ್ರಿ ಎಸ್ ಆರ್ ಬೊಮ್ಮಾಯಿ ಹಾಗೂ ತಾಯಿ ಗಂಗಮ್ಮಾ ಬೊಮ್ಮಾಯಿ ಸಮಾಧಿಗೆ ಭೇಟಿ ನೀಡಿದರು.
ಇನ್ಮೂ ನೂತನ ಸಿಎಂ ಆಗಮನದ ಹಿನ್ನೆಲೆಯಲ್ಲಿ ತಂದೆ ತಾಯಿ ಸಮಾಧಿ ಬಳಿಯಲ್ಲಿ ಕುಟುಂಬದಸ್ಥರು ಸಕಲ ಸಿದ್ಧತೆ ಮಾಡಿಕೊಂಡಿದ್ದು, ಸಮಾಧಿಗೆ ಭೇಟಿ ನೀಡಿದ್ದ ಸಿಎಂ ಬೊಮ್ಮಾಯಿವರು ತಂದೆ ಮಾಜಿ ಸಿಎಂ ಎಸ ಆರ್ ಬೊಮ್ಮಾಯಿ ಹಾಗೂ ತಾಯಿ ಗಂಗಮ್ಮಾ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿ, ಹಣೆ ಹಚ್ಚಿ ನಮಸ್ಕರಿಸಿ ಆರ್ಶೀವಾದ ಪಡೆದುಕೊಂಡರು.
