Breaking Newsಇತರ ಕ್ರೀಡೆಕ್ರೀಡೆಟೆನಿಸ್

ಆ್ಯಶ್ಲೆಗ್ ಬಾರ್ಟಿ ವಿಂಬಲ್ಡನ್‌ ಫೈನಲ್​ಗೆ

ಲಂಡನ್: ವಿಶ್ವದ ನಂ.1 ಆಟಗಾರ್ತಿ ಆ್ಯಶ್ಲೆಗ್ ಬಾರ್ಟಿ ಏಂಜಲಿಕ್ ಕೆರ್ಬರ್ ವಿರುದ್ಧ 6-3 7-6 (7-3) ಅಂತರದಲ್ಲಿ ಜಯ ಗಳಿಸಿ ಮೊದಲ ಬಾರಿಗೆ ವಿಂಬಲ್ಡನ್ ವನಿತೆಯರ ವಿಭಾಗದಲ್ಲಿ ಫೈನಲ್ ತಲುಪಿದ್ದಾರೆ.

ಗುರುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ 10 ವರ್ಷಗಳ ಹಿಂದೆ ಜೂನಿಯರ್ ಚಾಂಪಿಯನ್ ಪಟ್ಟ ಗೆದ್ದಿದ್ದ ಆಸ್ಟ್ರೇಲಿಯಾದ ಬಾರ್ಟಿ 2018ರ ಚಾಂಪಿಯನ್ ಕೆರ್ಬರ್ ಗೆ ಸೋಲಿನ ಆಘಾತ ನೀಡಿದರು.

ಫೈನಲ್ ಪಂದ್ಯದಲ್ಲಿ ಬಾರ್ಟಿ, ವಿಶ್ವದ ಮಾಜಿ ನಂ. 1 ಆಟಗಾರ್ತಿ ಕೊರೊಲಿನಾ ಪ್ಲಿಸ್ಕೊವಾ ಅಥವಾ ಬೆಲಾರೀಸ್ ನ ಆರಿನಾ ಸೆಬಲೆಂಕಾ ವಿರುದ್ಧ ಪ್ರಶಸ್ತಿಗಾಗಿ ಸೆಣಸಲಿದ್ದಾರೆ.1980ರ ನಂತರ ವಿಂಬಲ್ಡನ್ ಫೈನಲ್ ತಲುಪಿದ ಆಸ್ಟ್ರೇಲಿಯಾದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಬಾರ್ಟಿ ಪಾತ್ರರಾಗಿದ್ದಾರೆ.

ಇದರಿಂದ ನಾಳೆ ನಡೆಯುವ ಫೈನಲ್​​ ಪಂಧ್ಯದಲ್ಲಿ ಭಾರತದ ಸಾನಿಯಾ ಮಿರ್ಜಾ ಅವರನ್ನು ಎರದುಡಿಸಲ ಲಿದ್ದಾರೆ ಎನ್ನಲಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button