Breaking NewsLatestರಾಜಕೀಯರಾಷ್ಟ್ರೀಯಸುದ್ದಿ
ಧಾರ್ಮಿಕ ಮೂಲಭೂತವಾದದಿಂದ ರಾಷ್ಟ್ರಕ್ಕೆ ಉಳಿಗಾಲವಿಲ್ಲ: ಪಿಣರಾಯಿ ವಿಜಯನ್

ತಿರುವನಂತಪುರ: ಧಾರ್ಮಿಕ ಮೂಲಭೂತವಾದಿಗಳು ಎಲ್ಲಿ ಪ್ರಾಬಲ್ಯ ಸಾಧಿಸುವರೋ ಅಂತಹ ರಾಷ್ಟ್ರಗಳಿಗೆ ಉಳಿಗಾಲವಿಲ್ಲ. ಇದಕ್ಕೆ ಅಫ್ಘಾನಿಸ್ತಾನ ಸ್ಪಷ್ಟ ನಿದರ್ಶನವಾಗಿದೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಸಾಮಾಜಿಕ ಕ್ರಾಂತಿಯ ಹರಿಕಾರ ಶ್ರೀ ನಾರಾಯಣಗುರು ಅವರ 167ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಜಗತ್ತಿನೆಲ್ಲಡೆ ಮತಾಂಧತೆ, ಭಯೋತ್ಪಾದನೆ, ರಕ್ತಪಾತ ಹೆಚ್ಚಾಗಿದೆ. ಭಾರತದಲ್ಲೂ ಕೋಮು ವೈಷಮ್ಯದ ಘಟನಾವಳಿಗಳು ಹೆಚ್ಚಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಮಾನವರೆಲ್ಲರೂ ಒಂದೇ ಎಂದು ಸಾರಿರುವ ಹಿಂದಿನ ಮಹನೀಯರ ಆದರ್ಶವನ್ನು ಪ್ರತಿಯೊಬ್ಬ ಪ್ರಜೆಯೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ವಿಭಜಕ ಧಾರ್ಮಿಕ ಮೂಲಭೂತವಾದ ನಿಲ್ಲಬೇಕು. ಜಾತಿ, ಪಂಥ, ಧರ್ಮದ ಹೆಸರಲ್ಲಿ ಜನಾಂಗೀಯ ದ್ವೇಷದ ರಕ್ತಪಾತಗಳಿಗೆ ಮನುಕುಲ ಅಂತ್ಯಹಾಡಬೇಕು ಎಂದರು.
