Breaking NewsLatestಮನರಂಜನೆಸಿನಿಮಾಸೆಲೆಬ್ರಿಟಿ
Drugs Case: ಸಂಜನಾ, ರಾಗಿಣಿಗೆ ಮತ್ತೆ ಸಂಕಷ್ಟ: ಡ್ರಗ್ಸ್ ಸೇವಿಸಿದ್ದು ಎಫ್ಎಸ್ಎಲ್ ವರದಿಯಲ್ಲಿ ದೃಢ

ಬೆಂಗಳೂರು : ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್ ವುಡ್ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾಣಿ ಡ್ರಗ್ಸ್ ಸೇವಿಸಿದ್ದು ದೃಢವೆಂದು ಎಫ್ ಎಸ್ ಎಲ್ ವರದಿ ತಿಳಿಸಿದೆ.
ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೀಡಾಗಿದ್ದ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾಣಿ ಸದ್ಯ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಆದರೆ ಇದೀಗ ಮತ್ತೆ ಸಂಕಷ್ಟ ಎದುರಾಗಿದೆ.
ಪ್ರಕರಣ ನಡೆದು ಬರೋಬ್ಬರಿ 10 ತಿಂಗಳ ಬಳಿಕ ಆರೋಪಿಗಳ ತಲೆ ಕೂದಲಿನ ಎಫ್ ಎಸ್ ಎಲ್ ಸ್ಯಾಂಪಲ್ ಟೆಸ್ಟ್ ವರದಿ ಸಿಸಿಬಿ ಕೈ ಸೇರಿದೆ. ಎಫ್ ಎಸ್ ಎಲ್ ವರದಿಯಲ್ಲಿ ನಟಿಯರಾದ ರಾಗಿಣಿ, ಸಂಜನಾ, ರವಿಶಂಕರ್, ರಾಹುಲ್ ತೋನ್ಸೆ, ವಿರೇನ್ ಖನ್ನಾ, ಲೂಮ್ ಪೆಪ್ಪರ್ ಡ್ರಗ್ಸ್ ಸೇವಿಸಿರುವುದು ಖಚಿತವಾಗಿದೆ.
