ಕಥೆ

ದೇವನಿರುವ ನೆಲ್ಲಿ?

ಒಮ್ಮೆ ಒಬ್ಬ ವಿದ್ಯಾರ್ಥಿ ವಿವೇಕಾನಂದರನ್ನು ಕೇಳುತ್ತಾನಂತೆ ತಾವು ಯಾವಾಗಲೂ ನಾರಾಯಣ, ನಾರಾಯಣ ಎನ್ನುತ್ತೀರಿ, ನೀವು ಯಾವಾಗಲೂ ದೇವರ ಬಗ್ಗೆ ಹೇಳುತ್ತಿರುತ್ತೀರಿ. ಅವನು ಇರುವುದಾದರೆ ಅವನೇಕೆ ನಮಗೆ ಕಾಣುವುದಿಲ್ಲ. ನೋಡಲೇಕೆ ಆಗುವುದಿಲ್ಲ. ನೋಡಲಾಗದವನ್ನು ಇದ್ದಾನೆ ಎಂದು ನಂಬುವುದಾದರೂ ಹೇಗೆ?

ಎಂದು ಪ್ರಶ್ನಿಸಿದ್ದಕ್ಕೆ ವಿವೇಕಾನಂದರು ಅವನನ್ನು ಹೊರಗೆ ಕರೆದುಕೊಂಡು ಬಂದು ತಲೆಯೆತ್ತಿ ಆಕಾಶದಲ್ಲಿರುವ ಸೂರ್ಯನನ್ನು ನೋಡು ಎಂದರಂತೆ.ಆತ ತಲೆಯತ್ತಿ ನೋಡಿ, ತಕ್ಷಣ ತಲೆ ಕೆಳಗೆ ಮಾಡಿ ಮಧ್ಯಾಹ್ನದ ಹೊತ್ತು ಸೂರ್ಯನನ್ನು ನೋಡು ಎಂದರಂತೆ.

ಆತ ತಲೆ ಎತ್ತಿ ನೋಡಿದವನು ತಲೆ ಕೆಳಗೆ ಮಾಡಿ ಮಧ್ಯಾಹ್ನದ ಹೊತ್ತು ಸೂರ್ಯನನ್ನು ನೋಡಲು ಸಾಧ್ಯವಿಲ್ಲ ಗುರುಗಳೆ ಎಂದನು. ಆಗ ಸ್ವಾಮೀಜಿಯವರು ಈ ಸೂರ್ಯನಾರಾಯಣ ಆ ನಾರಯಣನ ಒಂದು ಅಂಶ ಮಾತ್ರ. ಇವನನ್ನು ನೋಡಲು ಸಾಧ್ಯವಾಗದಿದ್ದರೆ ನೀನು ದೇವರನ್ನು ನೋಡಲು ಹೇಗೆ ಸಾಧ್ಯ.

ಎಂದಾಗ ದೇವರ ಇರುವಿಕೆಯನ್ನು ಅರ್ಥಮಾಡಿಕೊಂಡು, ದೇವರಿಲ್ಲದೆ ಈ ಸೃಷ್ಟಿ ಇಲ್ಲ ಎಂಬ ನಂಬಿಕೆ ಅವನಲ್ಲಿ ಉಂಟಾಯಿತಂತೆ. ಪ್ರಕೃತಿ ಗಿಡ, ಮರ, ಹೂವು, ಹಣ್ಣು, ಹಕ್ಕಿಗಳ ಹಾಡಿನ ಮಾಧುರ್ಯದಲ್ಲಿ ದೇವರು ಕಾಣಿಸಿಕೊಳ್ಳುತ್ತಾನೆ. ಸರ್ವತೋಮುಖ ಸರ್ವವ್ಯಾಪಕ ವಿವೇಕಾನಂದರು ಅಗೋಚರ ಶಕ್ತಿಯ ಬೆಳಕಾಗಿದ್ದಾರೆ ಎಂದು ವಿದ್ಯಾರ್ಥಿಗಳಿಗೆ ಹೇಳಿದಾಗ ಅವನಿಗೆ ಜ್ಞಾನೋದಯವಾಯಿತು. ನನ್ನ ಕಣ್ತೆರೆಸಿದ ನೀವೇ ನನ್ನ ದೇವರು, ಎಂದು ವಿವೇಕಾನಂದರ ಶಿಷ್ಯ ನಾಗುತ್ತಾನೆ.

Spread the love

Related Articles

Leave a Reply

Your email address will not be published. Required fields are marked *

Back to top button