ಕಥೆ

ದೊಡ್ಡ ಕಲ್ಲಂಗಡಿ ಹಣ್ಣು


ರೈತನೊಬ್ಬ ತನ್ನ ಮನೆಯ ಹಿಂದಿನ ಜಮೀನಿನಲ್ಲಿ ಕಲ್ಲಂಗಡಿ ಹಣ್ಣನ್ನು ಬೆಳೆದಿದ್ದ. ಭಾರಿ ಗಾತ್ರದ ಕಲ್ಲಂಗಡಿ ಹಣ್ಣುಗಳು ಹೊಲದ ತುಂಬ ಹರಡಿಕೊಂಡಿದ್ದವು. ಅವುಗಳ ಬಗ್ಗೆ ರೈತ ಹೆಮ್ಮೆಯಿಂದ ಬೀಗುತ್ತಿದ್ದ. ಒಂದು ದಿನ ಆ ಪ್ರಾಂತ್ಯದ ರಾಜ ಮಾರುವೇಷದಲ್ಲಿ ರೈತನ ಹೊಲಕ್ಕೆ ಬಂದ. ತನ್ನ ಪ್ರಜೆಗಳ ಕುಂದು ಕೊರತೆಗಳನ್ನು ಅರಿಯುವುದು ಅವನ ಉದ್ದೇಶವಾಗಿತ್ತು. ರೈತನ ಹೊಲದಲ್ಲಿ ಭಾರಿ ಗಾತ್ರದ ಕಲ್ಲಂಗಡಿ ಹಣ್ಣುಗಳನ್ನು ಕಂಡು ಅವನಿಗೆ ಆಶ್ಚರ್ಯವಾಯಿತು. ಆ ದೊಡ್ಡ ಕಲ್ಲಂಗಡಿ ಹಣ್ಣನ್ನು ನನಗೆ ಕೊಡುವೆಯಾ? ಎಂದು ರಾಜ ಕೇಳಿದಕ್ಕೆ ರೈತ ಇಲ್ಲವೆಂದ. ’ಹಾಗಾದರೆ ಅದನ್ನು ಮಾರುವೆಯಾ?’ ರೈತ ಇಲ್ಲವೆಂದ. ಹಾಗಾದರೆ ಮತ್ತೇನು ಮಾಡುವೆ ?ಎಂದ, ಅದಕ್ಕೆ ರೈತ ಅದನ್ನು ಮಹಾರಾಜರಿಗೆ ಉಡುಗೊರೆಯಾಗಿ ನೀಡುವೆ ಎಂದು ಹೇಳಿದ. ಮಹರಾಜ ಅದನ್ನು ಸ್ವೀಕರಿಸದಿದ್ದರೆ ಏನು ಮಾಡುವೆ? ಏನು ಮಾಡುವುದಿಲ್ಲ ಎಂದ ರೈತ. ರಾಜ ಅರಮನೆಗೆ ಹೋದ, ಒಂದು ದಿನ ರೈತ ದೊಡ್ಡ ಕಲ್ಲಂಗಡಿಯೊಂದಿಗೆ ಮಹಾರಾಜರನ್ನು ಕಂಡು ’ಸ್ವಾಮಿ ತಮಗಾಗಿ ಕಲ್ಲಂಗಡಿ ಹಣ್ಣನ್ನು ತಂದಿರುವೆ ಸ್ವೀಕರಿಸಬೇಕು ಎಂದ. ಅದನ್ನು ಕಂಡ ರಾಜ ’ಇದು ವಿಶಿಷ್ಟವಾದದ್ದು, ಆದರೆ ನಾನಿದನ್ನು ಸ್ವೀಕಾರ ಮಾಡದಿದ್ದರೆ? ’ಮಹಾಪ್ರಭು ತಮ್ಮ ಪ್ರಶ್ನೆಗೆ ಉತ್ತರ ತಮಗೆ ಈಗಾಗಲೇ ಗೊತ್ತಿದೆ’. ಎಂದ. ಮಾರುವೇಷದಲ್ಲಿ ನನ್ನ ಹೊಲಕ್ಕೆ ಬಂದಿದ್ದವನು ಮಹಾರಾಜ ಎಂಬುದು ಅವನಿಗೆ ತಿಳಿದು ಹೋಗಿತ್ತು. ರೈತನ ಕೌಶಲ್ಯಕ್ಕೆ ಬೆರಗಾದ ರಾಜ ಕಲ್ಲಂಗಡಿ ಹಣ್ಣನ್ನು ಸ್ವೀಕರಿಸಿ, ಅವನಿಗೆ ಉಡುಗೊರೆ ನೀಡಿದ.

Spread the love

Related Articles

Leave a Reply

Your email address will not be published. Required fields are marked *

Back to top button