
ಪಾಕಿಸ್ತಾನ: ಪಾಕಿಸ್ತಾನದ ಜನರಲ್ ಬುಜ್ವಾ ಒಂದು ವಿಶೇಷ ಹೇಳಿಕೆ ನೀಡಿದ್ದಾರೆ. ಅವರು ಪಾಕಿಸ್ತಾನದ ಇತ್ತಿಚಿನ ರಾಜಕೀಯ ಬೆಳವಣಿಗೆಗಳ ಕುರಿತು ಮಾತನಾಡುತ್ತ ಪಾಕಿಸ್ತಾನದ ಜನರಲ್ ಆದ ನಾನು ಈಗ ಮೊದಲಿನಂತಿಲ್ಲ. ತಟಸ್ಥ ನೀತಿಯನ್ನು ಅನುಸರಿಸಿದ್ದೇನೆ. ಮೊದಲು ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವದ ಚಕ್ರವನ್ನು ನನಗೆ ಬೇಕಾದಂತೆ ತಿರುಗಿಸುವ ಶಕ್ತಿ ನನ್ನಲ್ಲಿತ್ತು, ಹಾಗೂ ನಾನು ಹಾಗೆ ಮಾಡುತ್ತಲೂ ಇದ್ದೆ. ಆದರೆ ಈಗ ನಾನು ನಿಮ್ಮಂತೆಯೇ ಇಲ್ಲಿನ ರಾಜಕೀಯ ಬೆಳವಣಿಗೆಯನ್ನು ಕಾತರದಿಂದ ಎದುರು ನೋಡುತ್ತಿದ್ದೇನೆ ಎಂದಿದ್ದಾರೆ.
ಮೊದಲು ನನಗೆ ಎಲ್ಲವೂ ತಿಳಿದಿರುತ್ತಿತ್ತು. ಆದರೆ ಈಗ ಅದೆಲ್ಲವೂ ಜನಸಾಮಾನ್ಯರ ಕೈಗೆ ಹೋಗಿದೆ. ನನಗೆ ಏನೂ ತಿಳಿದಿಲ್ಲ. ಒಂದೊಮ್ಮೆ ನನಗೆ ಎಲ್ಲವೂ ತಿಳಿದಿದ್ದರೂ ನನಗೆ ತಿಳಿದಿಲ್ಲದಂತೆಯೇ ನಾನಿರಬೇಕಾಗಿದೆ. ಏನೂ ತಿಳಿದಿಲ್ಲದಂತಿರಬೇಕು ಎನ್ನುವುದು ಹೊಸ ಪಾಕಿಸ್ತಾನದಲ್ಲಿ ನಾನು ತಿಳಿದುಕೊಂಡಿರುವ ನೀತಿ ಎಂದು ಬುಜ್ವಾ ಹೇಳಿದ್ದಾರೆ. ಆದರೆ ನಾನು ಈ ವ್ಯವಸ್ಥೆಯ ಬಗ್ಗೆ ಥ್ರಿಲ್ ಆಗಿದ್ದೇನೆ. ಈ ಥ್ರಿಲ್ಲನ್ನು ನಾನು ಎಂಜಾಯ್ ಮಾಡುತ್ತಿದ್ದೇನೆ ಎಂದು ಜನರಲ್ ಹೇಳಿದ್ದಾರೆ.




