ಆರೋಗ್ಯಲೈಫ್ ಸ್ಟೈಲ್

ಬೆಳಗ್ಗೆದ್ದು ಏನು ಮಾಡುತ್ತೀರಿ?

ಪವಿತ್ರಾ ಶೆಟ್ಟಿ

ಬೆಳಗ್ಗೆ ಏಳುವಾಗ ನೀವು ಮಾಡುವ ಕೆಲವು ತಪ್ಪುಗಳು ನಿಮ್ಮ ಇಡೀ ದಿನವನ್ನು ಹಾಳು ಮಾಡುತ್ತವೆ. ಹಾಗಿದ್ದರೆ ಆ ತಪ್ಪುಗಳು ಯಾವುವು?

ನಿದ್ದೆಯಾದ ಬಳಿಕವೂ ಗಂಟೆಗಟ್ಟಲೆ ಹಾಸಿಗೆಯಲ್ಲೇ ಉರುಳಾಡದಿರಿ. ಬೇಗನೆ ಎದ್ದು ನಿಮ್ಮ ದಿನಚರಿಯನ್ನು ಆರಂಭಿಸಿ. ಎದ್ದಾಕ್ಷಣ ಹಾಸಿಗೆಯಲ್ಲೇ ಮೊಬೈಲ್ ನೋಡುತ್ತಾ ಕೂರುವುದರಿಂದ ಸಮಯ ವ್ಯರ್ಥವಾಗುವುದು ಮಾತ್ರವಲ್ಲ ಕಣ್ಣಿಗೂ ಹಾಳು.

ಇನ್ನು ಎದ್ದಾಕ್ಷಣ ಕನಿಷ್ಠ 10 ನಿಮಿಷ ವ್ಯಾಯಾಮ ಮಾಡಿ. ಇದು ನಿಮ್ಮ ದೇಹಕ್ಕೆ ಚೈತನ್ಯ ನೀಡುತ್ತದೆ. ಧ್ಯಾನಕ್ಕೂ ಹತ್ತು ನಿಮಿಷ ಮೀಸಲಿಡಿ. ಯೋಗವೂ ನಿಮ್ಮ ದೇಹಾರೋಗ್ಯವನ್ನು ಸುಧಾರಿಸುತ್ತದೆ.

ಯಾವುದೇ ಕಾರಣಕ್ಕೆ ಉಪಹಾರವನ್ನು ಸ್ಕಿಪ್ ಮಾಡದಿರಿ. ಡಯಟ್ ಪ್ಲಾನ್ ನಲ್ಲಿದ್ದರೆ ಕಡಿಮೆ ಆಹಾರ ಸೇವಿಸಿ. ನಾಲ್ಕು ದೋಸೆ ಬದಲಿಗೆ 2 ತಿನ್ನಿ, ಆದರೆ ತಿನ್ನದೇ ಇರಬೇಡಿ.

ಬೆಳಿಗ್ಗೆ 9 ಗಂಟೆ ಮುಂಚೆ ಉಪಹಾರ ಸೇವಿಸಿದರೆ ನೀವು ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಮುಕ್ತಿ ಹೊಂದಬಹುದು. ಬೆಳಿಗ್ಗೆ ಖಾಲಿ ಹೊಟ್ಟೆಗೆ ಒಂದು ಲೋಟ ನೀರು ಕುಡಿದು ನಿಮ್ಮ ದಿನವನ್ನು ಆರಂಭಿಸಿ. ದಿನವಿಡೀ ಚುರುಕಾಗಿರಿ.

Spread the love

Related Articles

Leave a Reply

Your email address will not be published. Required fields are marked *

Back to top button