ಲೈಫ್ ಸ್ಟೈಲ್

ಮಳೆಗಾಲದಲ್ಲಿ ವಾರ್ಡ್ರೊಬ್ ನಲ್ಲಿ ಕಾಡುವಂತಹ ಫಂಗಸ್ ಸಮಸ್ಯೆಯನ್ನು ತಡೆಯಲು ಹೀಗೆ ಮಾಡಿ

  • – ಪವಿತ್ರಾ

ಮಳೆಗಾಲದಲ್ಲಿ ವಾತಾವರಣ ತುಂಬಾ ತೇವಾಂಶದಿಂದ ಕೂಡಿರುವುದರಿಂದ ವಸ್ತುಗಳ ಮೇಲೆ ಫಂಗಸ್ ಮೂಡುತ್ತದೆ. ಇದರಿಂದ ಆ ವಸ್ತುಗಳು ಬಹಳ ಬೇಗನೆ ಹಾಳಾಗುತ್ತದೆ. ಇದರಿಂದ ವಾರ್ಡ್ರೋಬ್ ನಲ್ಲಿಟ್ಟ ಬಟ್ಟೆಗಳು ಕೂಡ ಹಾಳಾಗುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಈ ಸಲಹೆ ಪಾಲಿಸಿ.

-ಒದ್ದೆಯಾದ ಬಟ್ಟೆಗಳನ್ನು ವಾರ್ಡ್ರೊಬ್ ನಲ್ಲಿ ಇಡಬೇಡಿ. ವಾರ್ಡ್ರೊಬ್ ನಲ್ಲಿ ಇಡುವ ಮುನ್ನ ಬಟ್ಟೆ ಸಂಪೂರ್ಣವಾಗಿ ಒಣಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಇಲ್ಲವಾದರೆ ಈ ಒದ್ದೆ ಬಟ್ಟೆ ಫಂಗಸ್ ಮೂಡಲು ಕಾರಣವಾಗುತ್ತದೆ ಮತ್ತು ಜೊತೆಗೆ ಇತರ ಬಟ್ಟೆಗಳನ್ನು ಕೆಡಿಸುತ್ತವೆ.

  • ವಾರ್ಡ್ರೊಬ್ ನಲ್ಲಿರುವ ಬಟ್ಟೆಗಳನ್ನು ಫಂಗಸ್ ನಿಂದ ರಕ್ಷಿಸಲು ಹಗಲಿನಲ್ಲಿ ಕಿಟಕಿಗಳನ್ನು ತೆರೆದಿಡಿ. ಸೂರ್ಯ ಬೆಳಕು, ತಾಜಾ ಗಾಳಿ ಮನೆಯೊಳಗೆ ಪ್ರವೇಶಿಸಲು ಅವಕಾಶ ಮಾಡಿ ಕೊಡಿ. ಇದರಿಂದ ಕೋಣೆಯಲ್ಲಿ ತೇವಾಂಶ ಕಡಿಮೆಯಾಗಿ ಫಂಗಸ್ ಸಮಸ್ಯೆ ಕಡಿಮೆಯಾಗುತ್ತದೆ.
  • ವಾರ್ಡ್ರೊಬ್ ಅನ್ನು ಒದ್ದೆಯಾಗದಂತೆ ನೋಡಿಕೊಳ್ಳಿ. ವಾರ್ಡ್ರೊಬ್ ಅನ್ನು ಒಣ ಬಟ್ಟೆಯಿಂದ ಚೆನ್ನಾಗಿ ಒರೆಸಿ ಕರ್ಪೂರಗಳನ್ನು ಹಾಕಿ ಬಳಿಕ ಸರಿಯಾಗಿ ಒಣಗಿದ ಬಟ್ಟೆಗಳನ್ನು ಇಡಿ.
  • ವಾರ್ಡ್ರೊಬ್ ಅನ್ನು ಗೋಡೆಗೆ ಹತ್ತಿರವಾಗಿ ಇಡಬೇಡಿ. ಮತ್ತು ತೇವಾಂಶ ಹೆಚ್ಚಾಗಿರುವ ಸ್ಥಳದಲ್ಲಿ ಇಡಬೇಡಿ. ಇದರಿಂದ ವಾರ್ಡ್ರೊಬ್ ನಲ್ಲಿ ತೇವಾಂಶ ಹೆಚ್ಚಾಗಿ ಫಂಗಸ್ ಬೆಳೆಯುತ್ತದೆ. ನೆಲದ ತೇವಾಂಶದಿಂದ ವಾರ್ಡ್ರೊಬ್ ನಲ್ಲಿರುವ ಬಟ್ಟೆ ಹಾಳಾಗಬಾರದಂತಿದ್ದರೆ ವಾರ್ಡ್ರೊಬ್ ಅನ್ನು ಮರದ ಹಲಗೆಯ ಮೇಲೆ ಇರಿಸಿ.

Spread the love

Related Articles

Leave a Reply

Your email address will not be published. Required fields are marked *

Back to top button