Latestಮನರಂಜನೆಸಿನಿಮಾಸೆಲೆಬ್ರಿಟಿ
ಮೆಗಾಸ್ಟಾರ್ ಪುತ್ರಿ ಸಂತೋಷವಾಗಿ ಬದುಕಿರಲು ಇವರೇ ಕಾರಣವಂತೆ

ಪತಿ ಕಲ್ಯಾಣ್ ದೇವ್ ಜೊತೆಗಿನ ದಾಂಪತ್ಯ ಜೀವನದ ಬಗ್ಗೆ ಹರಡಿರುವ ಸುದ್ದಿಗಳ ಬಳಿಕ ಮೆಗಾಸ್ಟಾರ್ ಚಿರಂಜೀವಿ ಪುತ್ರಿ ಶ್ರೀಜಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನ ಹಂಚಿಕೊಂಡಿದ್ದಾರೆ. ಅಣ್ಣ ರಾಮ್ ಚರಣ್ ಜೊತೆಗಿನ ಪೋಟೋ ಹಂಚಿಕೊಂಡು ಬರೆದುಕೊಂಡಿರುವ ಪೋಸ್ಟ್ನಲ್ಲಿ ಶ್ರೀಜಾ ಹಾಗೂ ಕಲ್ಯಾಣ್ ದೇವ್ ಮಧ್ಯೆ ಎಲ್ಲವೂ ಸರಿ ಇಲ್ಲ ಅನ್ನೋ ಸುದ್ದಿಗೆ ಮತ್ತಷ್ಟು ಪುಷ್ಠಿ ಸಿಕ್ಕಿದಂತಾಗಿದೆ.
ಅಣ್ಣ ರಾಮ್ಚರಣ್ ಜೊತೆ ಮುಂಬೈಗೆ ತೆರಳಿರುವ ಶ್ರೀಜಾ ಫೋಟೋವೊಂದನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು ತಾನೀಗ ಸಂತೋಷವಾಗಿ ಬದುಕಿರಲಿ ಕಾರಣವೇ ಇವರು ಎಂದು ಬರೆದುಕೊಂಡಿದ್ದಾರೆ.
ಕೆಲವು ದಿನಗಳ ಹಿಂದೆ ಶ್ರೀಜಾ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪತಿ ಕಲ್ಯಾಣ್ ದೇವ್ರನ್ನ ಅನ್ ಫಾಲೋ ಮಾಡಿದ್ದರು. ಹೀಗಾಗಿ ಈ ಜೋಡಿಗಳ ಮಧ್ಯೆ ಮನಸ್ತಾಪ ಆರಂಭವಾಗಿದೆ ಅನ್ನೋ ಸುದ್ದಿ ಹುಟ್ಟಿಕೊಂಡಿತ್ತು. ಇದೀಗ ಶ್ರೀಜಾ ಹಾಕಿರುವ ಪೋಸ್ಟ್ ಈ ಹಿಂದೆ ಹರಿದಾಡಿದ ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡುವಂತಿದೆ.



