Uncategorized

ಕವಿತೆ

ಅಪ್ಪ..
ಅಂತರಾಳದ ಅನಂತ ಆಹ್ಲಾದ ತೆ..
ನಿಷ್ಕಲ್ಮಶ ಮನದಾಳದ ಮುಗ್ಧತೆ..
ಬಣ್ಣದ ಕನಸುಗಳ ನೇಕಾರ..
ಅಪ್ಪನೆಂದರೆ ಅಮೃತದಂತೆ ಅಮರ..🤗

ಅವರೆಂದರೆ ಎದೆಯಾಳದ ಪರಿಶುದ್ದ ಒಲವು..
ತುಂಟಾಟ ದ ಜೊತೆ ವಿನಯವ ಕಲಿಸಿದ ಗುರುವು..
ಕಣ್ ಸನ್ನೆಯಲೆ ಬದುಕ ಗುರಿ ತಿಳಿಸಿದ ಗೆಲವು..
ಅಪ್ಪ ಎಂದೂ ಅಳಿಯದ ನಗುವ ನಲಿವು..🤗

ನಾ ಮಗಳು, ಅವರದು ಮಗು ಮನಸು..
ನಾನು ಅಪ್ಪನಿಗೆ ಕಾಣುವ ಕನಸು..
ತುಸು ಕೋಪವದು,ಮಾಗಿದ ಮುನಿಸು..
ಅವರ ಮಾತು – ಗುರಿತಲುಪ ಲು ಶ್ರಮವಹ ಸು..

– ಬಸವರಾಜ್ ಜಿ ಎಸ್
basavakgl276@gmail.com

Spread the love

Related Articles

Leave a Reply

Your email address will not be published. Required fields are marked *

Back to top button