Breaking Newsಇತರ ಕ್ರೀಡೆಕ್ರೀಡೆ

Tokyo Olympics: ಎರಡು ಬಾರಿ ಕೋವಿಡ್ ಸೋಂಕಿತನಿಗೆ 2 ಚಿನ್ನ..!

ಟೋಕಿಯೋ : ಇಂಗ್ಲೆಂಡ್ ನ ಟಾಮ್ ಡೇನ್ ಎರಡು ಬಾರಿ ಕೋವಿಡ್-19 ಸೋಂಕಿತರಾದರೂ ಚೇತರಿಸಿಕೊಂಡು ಟೋಕಿಯೋ ಒಲಿಂಪಿಕ್ಸ್ ಈಜಿನಲ್ಲಿ ಎರಡು ಚಿನ್ನದ ಪದಕ ಗೆದ್ದು ಅಚ್ಚರಿ ಮೂಡಿಸಿದ್ದಾರೆ.

ಕಳೆದ ಸೆಪ್ಟಂಬರ್ ನಲ್ಲಿ ಮೊದಲ ಬಾರಿಗೆ ಸೋಂಕು ತಗಲಿದಾಗ ಆಗಿನ್ನೂ ಒಲಿಂಪಿಕ್ಸ್ ಟ್ರಯಲ್ ನಡೆಯುತ್ತಿತ್ತು. ಚೇತರಿಸಿಕೊಂಡ ನಂತರ ಡೇನ್ ಒಲಿಂಪಿಕ್ಸ್ ಗೆ ಅರ್ಹತೆ ಪಡೆದರು. ಅರ್ಹತೆ ಪಡೆದು ಅಭ್ಯಾಸ ನಡೆಯುತ್ತಿರುವಾ ಎರಡನೇ ಬಾರಿಗೆ ಕೋವಿಡ್ ಸೋಂಕು ತಗಲಿತು. ತನ್ನ ಕ್ರೀಡಾ ಬದುಕೇ ಮುಗಿಯಿತೆಂಬ ಆತಂಕದಲ್ಲಿದ್ದರೂ ಡೇನ್ ಆತ್ಮವಿಶ್ವಾಸ ಕಳೆದುಕೊಂಡಿರಲಿಲ್ಲ.

ಟೋಕಿಯೋ ದಲ್ಲಿ ನಡೆದ 200 ಮೀ ಫ್ರೀ ಸ್ಟೈಲ್ ಈಜಿನಲ್ಲಿ ಡೇನ್ 1 ನಿಮಿಷ 44.22 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರು. ನಂತರ 4×200 ಮೀ ರಿಲೆಯಲ್ಲಿಯೂ ಬ್ರಿಟನ್ ತಂಡ ಚಿನ್ನ ಗೆಲ್ಲುವಲ್ಲಿ ಡೇನ್ ಅವರ ಪಾತ್ರ ಪ್ರಮುಖವಾಗಿತ್ತು. ಯಾವುದೇ ಸಂಕಷ್ಟದಲ್ಲೂ ಆತ್ಮವಿಶ್ವಾಸವನ್ನು ಕಳೆದುಕೊಳ್ಳದಿದ್ದರೆ ಯಶಸ್ಸನ್ನು ಕಾಣಬಹುದು ಎಂಬುದನ್ನು ಡೇನ್ ಕ್ರೀಡಾ ಜಗತ್ತಿಗೆ ತೋರಿಸಿಕೊಟ್ಟರು.

Spread the love

Related Articles

Leave a Reply

Your email address will not be published. Required fields are marked *

Back to top button