ಇತರ ಕ್ರೀಡೆಕ್ರೀಡೆ
ಒಲಿಂಪಿಕ್ಸ್: ನಿಮ್ಮ ಪದಕ ನೀವೇ ಕೊರಳಿಗೆ ಹಾಕಿಕೊಳ್ಳಿ

ಟೋಕಿಯೊ: ಮುಂದಿನ ವಾರ ನಡೆಯಲಿರುವ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದವರು ಯಾರಾದರೂ ಬಂದು ನಿಮ್ಮ ಕೊರಳಿಗೆ ಪದಕ ಹಾಕಿ, ಕೈಕುಲುಕಿ ಅಭಿನಂದಿಸಿ ಅಪ್ಪಿಕೊಳ್ಳುತ್ತಾರೆ ಎಂದು ಕಾಯಬೇಡಿ.
ನಿಮ್ಮ ಪದಕವನ್ನ ನೀವೇ ಧರಿಸಿಕೊಂಡು ಹೋಗಬೇಕು ಏಕೆಂದರೆ ಅಲ್ಲಿಯೂ ಕೋವಿಡ್-19 ನಿಯಮ ಪಾಲಿಸಲಾಗುತ್ತದೆ. ಒಲಿಂಪಿಕ್ಸ್ ಇತಿಹಾಸದಲ್ಲೇ ಈ ರೀತಿ ನಡೆಯಲಿರುವುದು ಇದೇ ಮೊದಲು.
ಪೋಡಿಯಂನಲ್ಲಿ ಮೂರು ಪದಕಗಳನ್ನು ಇರಿಸಲಾಗಿರುತ್ತದೆ. ಗೆದ್ದವರು ಅಲ್ಲಿಗೆ ಬಂದು ತಮ್ಮ ಸ್ಥಾನಕ್ಕನುಗುಣವಾಗಿ ಪಡೆದ ಪದಕವನ್ನು ಕೊರಳಿಗೆ ಹಾಕಿಕೊಂಡು ಹೋಗಬೇಕು ಎಂದು ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಧ್ಯಕ್ಷ ಥಾಮಸ್ ಬ್ಯಾಚ್ ಹೇಳಿದ್ದಾರೆ.




