Breaking NewsLatestಇತರ ಕ್ರೀಡೆಕ್ರೀಡೆ
Tokyo Olympics|ಹಾಕಿ: ಭಾರತಕ್ಕೆ ಹೀನಾಯ ಸೋಲು

ಟೋಕಿಯೋ: ವಿಶ್ವದ ನಂ1. ತಂಡ ಆಸ್ಟ್ರೇಲಿಯಾ ವಿರುದ್ಧ ಅತ್ಯಂತ ಕಳಪೆ ಪ್ರದರ್ಶನ ತೋರಿದ ಭಾರತ ಟೋಕಿಯೋ ಒಲಿಂಪಿಕ್ಸ್ ನ ಎರಡನೇ ಪಂದ್ಯದಲ್ಲಿ 1-7 ಗೋಲುಗಳ ಹೀನಾಯ ಸೋಲನುಭವಿಸಿದೆ.
ವೆಟಾನ್ (10ನೇ ನಿಮಿಷ), ಹೆವಾರ್ಡ್ (21ನೇ ನಿಮಿಷ), ಒಗಿಲ್ವೆ (23ನೇ ನಿಮಿಷ), ಬಿಲ್ಟ್ಸ್ (26ನೇ ನಿಮಿಷ), ಬ್ಲೇಕ್ ಗೊವರ್ಸ್ (40 ಮತ್ತು 42ನೇ ನಿಮಿಷ) ಮತ್ತು ಬ್ರಾಂಡ್ (52ನೇ ನಿಮಿಷ) ಆಸ್ಟ್ರೇಲಿಯಾದ ಪರ ಗೋಲು ಗಳಿಸಿದರು. ಭಾರತದ ಪರ 34ನೇ ನಿಮಿಷದಲ್ಲಿ ದಿಲ್ ಪ್ರೀತ್ ಸಿಂಗ್ ಏಕೈಕ ಗೋಲು ಗಳಿಸಿದರು.
ಆಸ್ಟ್ರೇಲಿಯಾ ಆರಂಭದಿಂದಲೂ ಆಕ್ರಮಣಕಾರಿ ಆಟ ಪ್ರದರ್ಶಿಸಿತ್ತು. ಪರಿಣಾಮ ಪ್ರತಿ ಕ್ವಾರ್ಟರ್ ನಲ್ಲೂ ಗೋಲು ಗಳಿಸಿತ್ತು. ಭಾರತಕ್ಕೆ ಮೂರು ಪೆನಾಲ್ಡಿ ಕಾರ್ನರ್ ಅವಕಾಶ ಸಿಕ್ಕರೂ ಗೋಲುಗಳಿಸುವಲ್ಲಿ ವಿಫಲವಾಗಿತ್ತು. ಇನ್ನೊಂದೆಡೆ ಆಸ್ಟ್ರೇಲಿಯಾ ಪ್ರತಿಯೊಂದು ಪೆನಾಲ್ಟಿ ಕಾರ್ನರನ್ನು ಗೋಲಾಗಿ ಪರಿವರ್ತಿಸಿತ್ತು.
ಇದರೊಂದಿಗೆ ಭಾರತಕ್ಕೆ ಭಾನುವಾರ ಯಾವುದೇ ಪದಕ ದಕ್ಕಲಿಲ್ಲ.
