Breaking NewsLatestಇತರ ಕ್ರೀಡೆಕ್ರೀಡೆ
ಟೋಕಿಯೋ: ಚಿನ್ನ ಗೆದ್ದ 13 ವರ್ಷದ ಬಾಲಕಿ!!

ಟೋಕಿಯೋ: ಇಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ 13 ವರ್ಷದ ಬಾಲಕಿ ಚಿನ್ನದ ಪದಕ ಗೆದ್ದು ದಾಖಲೆ ಬರೆದಿದ್ದಾಳೆ.
ಜಪಾನಿನ ಮೊಮಿಜಿ ನಿಶಿಯಾ ಸ್ಕೇಟ್ ಬೋರ್ಡಿಂಗ್ ವಿಭಾಗದಲ್ಲಿ 15.26 ಅಂಕಗಳನ್ನು ಗೆಲ್ಲುವ ಮೂಲಕ ಈ ಐತಿಹಾಸಿಕ ದಾಖಲೆ ಬರೆದಳು. ಸ್ಕೇಟ್ ಬೋರ್ಡಿಂಗ್ ಸ್ಪರ್ಧೆ ಮೊದಲ ಬಾರಿಗೆ ಅಳವಡಿಸಿದ್ದರಿಂದ ನಿಶಿಯಾ ಚಿನ್ನ ಗೆದ್ದ ಮೊದಲ ಮತ್ತು ಅತ್ಯಂತ ಕಿರಿಯ ಮಹಿಳೆ ಎನಿಸಿದ್ದಾರೆ.
1936ರ ಬರ್ಲಿನ್ ಒಲಿಂಪಿಕ್ಸ್ ನಲ್ಲಿ ಮಾರ್ಜೊರಿ ಗೆಸ್ಟ್ರಿಂಗ್ 3 ಮೀಟರ್ ಸ್ಪ್ರಿಂಗ್ ಬೋರ್ಡಿಂಗ್ ನಲ್ಲಿ ಪದಕ ಗೆದ್ದಾಗ ಅವರಿಗೆ 13 ವರ್ಷ 286 ದಿನಗಳಾಗಿತ್ತು. ನಿಶಿಯಾಗೆ 13 ವರ್ಷ 330 ದಿನಗಳು.
