Latestಇತರ ಕ್ರೀಡೆಕ್ರೀಡೆ

Pankaj Advani: ಪಂಕಜ್ ಆಡ್ವಾಣಿಗೆ 24ನೇ ವಿಶ್ವ ಕಿರೀಟ

ದೊಹಾ: ಭಾರತದ ಶ್ರೇಷ್ಠ ಸ್ನೂಕರ್ ಮತ್ತು ಬಿಲಿಯರ್ಡ್ಸ್ ತಾರೆ ಕರ್ನಾಟಕದ ಪಂಕಜ್ ಆಡ್ವಾಣಿ ಐಬಿಎಸ್ಎಫ್ 6ರೆಡ್ ಸ್ನೂಕರ್ ವಿಶ್ವ ಚಾಂಪಿಯನ್ಷಿಪ್ ನಲ್ಲಿ ಪಾಕಿಸ್ತಾನದ ಬಾಬರ್ ಮಸ್ಹಿ ವಿರುದ್ಧ ಜಯ ಗಳಿಸಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಪಂಕಜ್ ಅವರು ಗೆದ್ದಿರುವುದು ಇದು 24ನೇ ವಿಶ್ವ ಪ್ರಶಸ್ತಿಯಾಗಿದೆ. ಕಳೆದ ವಾರ 11 ನೇ ಏಷ್ಯನ್ ಪ್ರಶಸ್ತಿ ಗೆದ್ದ ಪಂಕಜ್ ಫೈನಲ್ ನ ಮೊದಲ ಫ್ರೇಮ್ ನಲ್ಲಿ 42-13 ಅಂತರದಲ್ಲಿ ಜಯ ಗಳಿಸಿದರು.

ಎರಡನೇ ಫ್ರೇಮ್ ನಲ್ಲಿ ಬಾಬರ್ 38-14 ಅಂತರದಲ್ಲಿ ಯಶಸ್ಸು ತಮ್ಮದಾಗಿಸಿಕೊಂಡರು. ನಂತರ ಪಂಕಜ್ ಮೂರು ಮತ್ತು ನಾಲ್ಕನೇ ಫ್ರೇಮ್ ಗಳಲ್ಲಿ ಜಯ ಗಳಿಸಿ ಪ್ರಶಸ್ತಿ ಗೆದ್ದರು.
ಸೆಮಿಫೈನಲ್ ನಲ್ಲಿ ಪಂಕಜ್ ಏಷ್ಯನ್ ಫೈನಲಿಸ್ಟ್ ಅಮೀರ್ ಸರ್ಖೋಷ್ ವಿರುದ್ಧ 6-3 ಅಂತರದಲ್ಲಿ ಜಯ ಗಳಿಸಿದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button