Breaking Newsಇತರ ಕ್ರೀಡೆಕ್ರೀಡೆ
ಚಿನ್ನದ ಹುಡುಗ ಪ್ರಮೋದ್ ಗೆ 6 ಕೋಟಿ ರೂ. ಉಡುಗೊರೆ ನೀಡಿದ ಒಡಿಶಾ ಮುಖ್ಯಮಂತ್ರಿ

ಭುವನೇಶ್ವರ್: ಟೋಕಿಯೋ ಪ್ಯಾರಾಲಿಂಪಿಕ್ಸ್ ಬ್ಯಾಡ್ಮಿಂಟನ್ ನಲ್ಲಿ ಚಿನ್ನದ ಪದಕ ಗೆದ್ದಿದ್ದ ಪ್ರಮೋದ್ ಭಗತ್ ಅವರಿಗೆ ಒಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಸನ್ಮಾನ ಮಾಡಿ 6 ಕೋಟಿ ರೂ.ಗಳ ನಗದು ಬಹುಮಾನ ನೀಡಿದರು.
ಕಳಿಂಗ ಕ್ರೀಡಾಂಗಣದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಪ್ರಮೋದ್ ಭಗತ್ ಗೆ ಎ ದರ್ಜೆಯ ಸರಕಾರಿ ನೌಕರಿಯನ್ನೂ ಮುಖ್ಯಮಂತ್ರಿಗಳು ಘೋಷಿಸಿದರು.
“ನಿಮ್ಮನ್ನು ಗೌರವಿಸಲು ನನಗೆ ಹೆಮ್ಮೆ ಅನಿಸುತ್ತಿದೆ. ನಿಮ್ಮ ಸಾಧನೆ ಇಡೀ ದೇಶಕ್ಕೆ ಪ್ಯಾರಾ ಅಥ್ಲೀಟ್ ಗಳಿಗೆ ಸ್ಫೂರ್ತಿಯನ್ನುಂಟುಮಾಡುವಂಥದ್ದು. ಇಡೀ ದೇಶವೇ ಹೆಮ್ಮೆಪಡುವಂಥ ಸಾಧನೆ ನೀವು ಮಾಡಿದ್ದೀರಿ” ಎಂದು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ನುಡಿದರು
