ಇತರ ಕ್ರೀಡೆಕ್ರೀಡೆ
ದಾಖಲೆ ಸರಿಗಟ್ಟಿದ ಚಾಂಪಿಯನ್ ಜೊಕೊವಿಕ್

ಲಂಡನ್ : ಇಟಲಿಯ ಮ್ಯಾಟಿಯೊ ಬೆರೆಟ್ಟಿನಿ ವಿರುದ್ಧ ನಾಲ್ಕು ಸೆಟ್ ಗಳ ರೋಚಕ ಜಯ ಗಳಿಸಿದ ನೊವಾಕ್ ಜೊಕೊವಿಕ್ ಆರನೇ ಬಾರಿಗೆ ವಿಂಬಲ್ಡನ್ ಚಾಂಪಿಯನ್ಷಿಪ್ ಗೆಲ್ಲುವ ಮೂಲಕ 20ನೇ ಗ್ರ್ಯಾನ್ ಸ್ಲಾಮ್ ಗೆದ್ದ ದಾಖಲೆಯನ್ನು ಸರಿಗಟ್ಟಿದ್ದಾರೆ.
ಸ್ಪೇನ್ ನ ರಾಫೆಲ್ ನಡಾಲ್ ಮತ್ತು ಸ್ವಿಜರ್ಲೆಂಡ್ ನ ರೋಜರ್ ಫೆಡರರ್ 20ಗ್ರ್ಯಾನ್ ಸ್ಲಾಮ್ ಗೆದ್ದ ಇತರ ಆಟಗಾರರು. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಜೊಕೊವಿಕ್ 6-7 (4-7), 6-4, 6-4, 6-3 ಅಂತರದಲ್ಲಿ ಜಯ ಗಳಿಸಿ ಇತಿಹಾಸ ಬರೆದರು.
ವೃತ್ತಿ ಬದುಕಿನ 30ನೇ ಫೈನಲ್ ಪಂದ್ಯ ಆಡಿದ ಜೊಕೊವಿಕ್ ಇದುವರೆಗೂ 9 ಆಸ್ಟ್ರೇಲಿಯಾ ಓಪನ್, 2 ಫ್ರೆಂಚ್ ಓಪನ್ ಮತ್ತು 3 ಯುಎಸ್ ಓಪನ್ ಗೆದ್ದಿದ್ದರು




