Breaking Newsಇತರ ಕ್ರೀಡೆಕ್ರೀಡೆ

ಜಾವೆಲಿನ್ ನಲ್ಲಿ ಫೈನಲ್ ತಲುಪಿದ ನೀರಜ್ ಚೋಪ್ರಾ

ಟೋಕಿಯೋ: ಭಾರತದ ನಂ.1 ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಒಲಿಂಪಿಕ್ಸ್ ಅರ್ಹತಾ ಸುತ್ತಿನಲ್ಲಿ 86.65 ಮೀ. ದೂರಕ್ಕೆ ಎಸೆದು ಫೈನಲ್ ತಲುಪಿದ್ದಾರೆ. ಆದರೆ ಶಿವಪಾಲ್ 76.40 ಮೀ. ದೂರಕ್ಕೆ ಎಸೆದು ಫೈನಲ್ ತಲಪುವಲ್ಲಿ ವಿಫಲರಾಗಿದ್ದಾರೆ. ನೀರಜ್ ಚೋಪ್ರಾ ಭಾರತದ ಪರ ಪದಕ ಗೆಲ್ಲುವ ಫೇವರಿಟ್ ಎನಿಸಿದ್ದಾರೆ.

ಭಾರತದ ದೀಪಕ್ ಪೂನಿಯಾ ಪುರುಷರ 85 ಕೆಜಿ ಫ್ರೀಸ್ಟೈಲ್ ವಿಭಾಗದ ಕುಸ್ತಿಯಲ್ಲಿ ನೈಜೀರಿಯಾದ ಅಗಿಯೊಮೊರ್ ವಿರುದ್ಧ 12-1 ಅಂತರದಲ್ಲಿ ಜಯ ಗಳಿಸಿ ಮುಂದಿನ ಸುತ್ತು ತಲುಪಿದ್ದಾರೆ, ವನಿತೆಯ ವಿಭಾಗಲ್ಲಿ ಅನ್ಷು ಮನಿಕ್ ಸೋಲಿಗೆ ಶರಣಾಗಿದ್ದು, ಗೆದ್ದ ಬೆಲಾರೂಸ್ ನ ಕಾರ್ಚಕಿನಾ ಫೈನಲ್ ತಲುಪಿದರೆ ಅನ್ಷಿಗೆ ರಿಪಿಚೇಜ್ ನಲ್ಲಿ ಸ್ಪರ್ಧಿಸುವ ಅವಕಾಶವಿದೆ.

ವನಿತೆಯರ ಗಾಲ್ಫ್ ನಲ್ಲಿ ಅದಿತಿ ಅಶೋಕ್ ಮತ್ತು ದೀಕ್ಷಾ ಮೊದಲ ಸುತ್ತಿನ ಹೋರಾಟಕ್ಕಾಗಿ ಅಂಗಣಕ್ಕಿಳಿದಿದ್ದಾರೆ.

ಆಗಸ್ಟ್ 7 ರಂದು ನಡೆಯುವ ಜಾವೆಲಿನ್ ಎಸೆತದ ಫೈನಲ್ ನಲ್ಲಿ ಜಗತ್ತಿನ ಒಟ್ಟು 12 ಎಸೆತಗಾರರು ಸ್ಪರ್ಧಿಸುತ್ತಿದ್ದು, ಅವರಲ್ಲಿ ನೀರಜ್ ಚೋಪ್ರಾ ಅವರು ಅತಿ ಹೆಚ್ಚು ದೂರಕ್ಕೆ ಎಸೆದಿರುವುದು ಖುಷಿಪಡುವ ಸಂಗತಿ.

Related Articles

Leave a Reply

Your email address will not be published. Required fields are marked *

Back to top button